KSOU ಪ್ರವೇಶಾತಿ ಪ್ರಾರಂಭ; ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

1 min read

Tumkurnews
ಮೈಸೂರು; ಮೈಸೂರಿನ ಕರಾಮುವಿಯ 2022-23ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿ ಪ್ರವೇಶಾತಿ ಪ್ರಾರಂಭವಾಗಿದೆ.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿರುತ್ತದೆ.
ಕೆಎಸ್‌ಒಯು ವಿಶ್ವವಿದ್ಯಾಲಯ ಧನಸಹಾಯ ಅಯೋಗದ (UGC) ಮಾನ್ಯತೆ ಪಡೆದಿದೆ.
ವಿವಿಯು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸಂಪೂರ್ಣ ವಿವರಗಳನ್ನು ಈ ಕೆಳಗಿನಂತೆ ತಿಳಿಸಲಾಗಿದೆ.
ವಿವಿಧ ಶೈಕ್ಷಣಿಕ ಕೋರ್ಸ್‌ಗಳು;
ಸ್ನಾತಕ ಪದವಿ – ಬಿ.ಎ, ಬಿ.ಕಾಂ, ಬಿ.ಬಿ.ಎ (Marketing Management), ಬಿ.ಸಿ.ಎ, ಬಿ.ಲಿಬ್.ಐ ಎಸ್ಸಿ., ಬಿ.ಎಸ್ಸಿ (General, Home Science, IT)
ಸ್ನಾತಕೋತ್ತರ ಪದವಿ MA ವಿಷಯಗಳು; ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಶಿಕ್ಷಣ ಶಾಸ್ತ್ರ., ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ (ಸೆಮಿಸ್ಟರ್ ಪರೀಕ್ಷೆ).
ತೆಲುಗು, ಉರ್ದು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ, ಸಾರ್ವಜನಿಕ ಆಡಳಿತ (ವಾರ್ಷಿಕ ಪರೀಕ್ಷೆ).
– ಎಂ.ಕಾಂ, (Dual Specialization – 1.Accounting and Finance/HRM., 2. Marketing Management and HRM/ Finance)
ಎಂ.ಬಿ.ಎ ( AICTE Approved) (Specialization – •Finance • HRM • Marketing Management • Operations • Tourism • Corporate Law • Information Technology)
-M.Sc ಕೋರ್ಸ್‌ಗಳು – ಜೀವ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ, ಕ್ಲಿನಿಕಲ್ ನ್ಯೂಟ್ರಿಷನ್ ಅಂಡ್ ಡಯಟೆಟಿಕ್ಸ್, ಪರಿಸರ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಭೂಗೋಳ ಶಾಸ್ತ್ರ, ಮಾಹಿತಿ ವಿಜ್ಞಾನ, ಗಣಿತಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಭೌತಶಾಸ್ತ್ರ, ಮನೋವಿಜ್ಞಾನ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಫುಡ್ ಅಂಡ್ ನ್ಯೂಟ್ರಿಷನ್ ಸೈನ್ಸ್.
– ಎಂ.ಲಿಬ್‌.ಐ ಎಸ್ಸಿ
– ಪಿ.ಜಿ ಡಿಪ್ಲೊಮಾ (Graduate Based)
ಕಮ್ಯೂನಿಕೇಟಿವ್ ಇಂಗ್ಲಿಷ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಇಂಗ್ಲಿಷ್, ಕುವೆಂಪು ಸಾಹಿತ್ಯ, ವ್ಯವಹಾರಿಕ ಕಾನೂನು, ವ್ಯವಹಾರಿಕ ನಿರ್ವಹಣೆ, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು ನಿರ್ವಹಣೆ, ಅಂಬೇಡ್ಕರ್ ಅಧ್ಯಯನ, ಮಾರುಕಟ್ಟೆ ನಿರ್ವಹಣೆ, ಅಂಬೇಡ್ಕರ್ ಅಧ್ಯಯನ, ಮಾರುಕಟ್ಟೆ ನಿರ್ವಹಣಾಶಾಸ್ತ್ರ, ನ್ಯೂಟ್ರಿಷನ್ ಅಂಡ್ ಡಯಟೆಟಿಕ್ಸ್‌ , ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಶನ್.
ಡಿಪ್ಲೊಮಾ- (10+2 Based)
ಡಿಪ್ಲೊಮಾ -ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಅಂಡ್ ಹೆಲ್ತ್ ಎಜುಕೇಷನ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಷನ್. ಅರ್ಲಿ ಚೈಲ್ಡ್ ಕೇರ್ ಅಂಡ್ ಎಚುಕೇಷನ್.
ಸರ್ಟಿಫಿಕೇಟ್ – (10+2 Based)
ಕನ್ನಡ, ಪಂಚಾಯತ್ ರಾಜ್, ಮಾಹಿತಿ ಸಂವಹನ ತಂತ್ರಜ್ಞಾನ, ನ್ಯೂಟ್ರಿಷನ್ ಅಂಡ್ ಫುಡ್.
ಪ್ರವೇಶಾತಿಗೆ ಸಂಬಂಧಿಸಿದ ಮುಖ್ಯ ದಿನಾಂಕಗಳು ಬಿಎ, ಬಿ.ಕಾಂ, ಬಿ.ಬಿ.ಎ, ಬಿ.ಎಸ್ಸಿ, ಬಿ.ಸಿ.ಎ, ಎಂಎ, ಎಂ.ಕಾಂ, ಎಂ.ಎಸ್ಸಿ, ಬಿ.ಲಿಬ್.ಐ.ಎಸ್ಸಿ, ಎಂ.ಲಿಬ್.ಐ.ಎಸ್ಸಿ, ಡಿಪ್ಲೊಮ, ಪಿಜಿ ಡಿಪ್ಲೊಮ ಸರ್ಟಿಫಿಕೇಟ್ .
ಈ ಮೇಲ್ಕಂಡ ಕೋರ್ಸ್ ‍ಗಳ ಪ್ರಥಮ ವರ್ಷದ ಪ್ರವೇಶಾತಿಗೆ ಪ್ರಾರಂಭ ದಿನಾಂಕ- 20/06/2022.
ಪ್ರವೇಶಾತಿ ಶುಲ್ಕದಲ್ಲಿ ವಿಶೇಷ ರಿಯಾಯಿತಿ:
1. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ,
2. ಡಿಫೆನ್ಸ್, ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ,
3. ಅಟೋ, ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ,
ಪೂರ್ಣ ಶುಲ್ಕ ವಿನಾಯಿತಿ:
1. ಕೋವಿಡ್ ನಿಂದ ಮರಣ ಹೊಂದಿದ ಪೋಷಕ ಮಕ್ಕಳಿಗೆ
2. ಟ್ರಾನ್ಸ್ ಜೆಂಡರ್, ತೃತೀಯ ಲಿಂಗಿಗಳಿಗೆ
3. ದೃಷ್ಟಿ ಹೀನ ವಿದ್ಯಾರ್ಥಿಗಳಿಗೆ (ಬಿ.ಎಡ್, ಎಂಸಿಎ ಹೊರತು ಪಡಿಸಿ).
ಸೂಚನೆ: SC, ST, OBC ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ SSP ಮು‌ಖಾಂತರ ವಿದ್ಯಾರ್ಥಿ ವೇತನ ಪಡೆಯಬಹುದು.
ಅರ್ಜಿ ಸಲ್ಲಿಕೆ ಹೇಗೆ?;
ಮೇಲೆ ತಿಳಿಸಿದ ಯಾವುದೇ ಕೋರ್ಸ್‌ಗಳ ಪ್ರವೇಶಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ನಂತರ ಕಡ್ಡಾಯವಾಗಿ ನಿಮ್ಮ ಹತ್ತಿರದ ಪ್ರಾದೇಶಿಕ ಕೇಂದ್ರಕ್ಕೆ ಅಥವಾ KSOU ಕೇಂದ್ರ ಕಚೇರಿ ಮೈಸೂರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ನಂತರ Debt Card, Cradit Card ಮೂಲಕ ಪ್ರವೇಶಾತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆದುಕೊಳ್ಳಬಹುದು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕರಾಮುವಿ ಆನ್‌ಲೈನ್‌ ಪೋರ್ಟಲ್ ಡೈರೆಕ್ಟ್‌ ಲಿಂಕ್‌ ಈ ಕೆಳಗಿನಂತಿದೆ.
KSOU Online Admission Portal http://ksouportal.com/views/StudentHome.aspx or www.ksoumysuru.ac.in

ಪ್ರವೇಶ ಪ್ರಕ್ರಿಯೆ ಶುಲ್ಕವನ್ನು ಆನ್‌ಲೈನ್‌ ಮುಖಾಂತರ ಮಾತ್ರ ಪಾವತಿಸಬಹುದಾಗಿದೆ. ಪ್ರವೇಶಾತಿಯ ನಂತರ ಐಡಿ ಕಾರ್ಡ್‌ ಮತ್ತು ಶೈಕ್ಷಣಿಕ ಕೋರ್ಸ್‌ ಸಿದ್ಧಪಾಠಗಳನ್ನು ತಾವು ಆಯ್ಕೆ ಮಾಡಿಕೊಂಡಿರುವ ಪ್ರಾದೇಶಿಕ ಕೇಂದ್ರದಲ್ಲಿಯೇ ಪಡೆಯಬಹುದಾಗಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರವೇಶಾತಿ ಸಂದರ್ಭದಲ್ಲಿ ಮಾತ್ರ ಕೇಂದ್ರ ಕಚೇರಿ ಮತ್ತು ಪ್ರಾದೇಶಿಕ ಕೇಂದ್ರಗಳು ಪ್ರವೇಶಾತಿ ಸಂದರ್ಭದಲ್ಲಿ ‌ಮಾತ್ರ ಸರ್ಕಾರಿ ರಜಾ ದಿನಗಳಾದ ಭಾನುವಾರ ಮತ್ತು 2ನೇ ಶನಿವಾರ ಹಾಗೂ 4ನೇ ಶನಿವಾರ ಕಚೇರಿ ತೆರೆಯುವ ಮೂಲಕ ಪ್ರವೇಶಾತಿ ಮಾಡಿಕೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ;
ಡಾ. ಲೋಕೇಶ ಆರ್ ,
ಪ್ರಾದೇಶಿಕ ನಿರ್ದೇಶಕರು,
ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ,
ಸಿಎ-07, ಟೂಡಾ ಲೇಔಟ್, ರಾಜೀವ್ ಗಾಂಧಿ ನಗರ, ಮೇಳೆಕೋಟಿ-ವೀರಸಾಗರ, ತುಮಕೂರು-572 105.
ದೂ.0816-2955580, ಮೊ.9844506629

About The Author

You May Also Like

More From Author

+ There are no comments

Add yours