ಮಧುಗಿರಿಯಲ್ಲಿ ಭೀಕರ ಅಪಘಾತ: ಪಾವಗಡದ ಐವರು ಸಾವು
Tumkurnews
ಮಧುಗಿರಿ: ಇಲ್ಲಿನ ಕೆರೆಗಳಪಾಳ್ಯದ ಬಳಿ ಕಳೆದ ರಾತ್ರಿ ಎರಡು ಕಾರುಗಳ ನಡುವೆ ಮುಖಾಮುಖಿಯಾಗಿ ಭೀಕರ ಅಪಘಾತವಾಗಿದ್ದು, ಪಾವಗಡ ತಾಲ್ಲೂಕಿನ ಐವರು ಸಾವನ್ನಪ್ಪಿದ್ದಾರೆ.
ಪಾವಗಡ ತಾಲ್ಲೂಕು ಎತ್ತಿನಹಳ್ಳಿ ಗ್ರಾಮದ ಜನಾರ್ಧನ ರೆಡ್ಡಿ(50), ಸಿಂಧೂ(33), ವೇದಾಸ್ ರೆಡ್ಡಿ(12), ನಾಗರಾಜ್(37) ಹಾಗೂ ಆನಂದ್(30) ಮೃತ ದುರ್ದೈವಿಗಳು.
ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಮಧುಗಿರಿ ಪೊಲೀಸರೊಂದಿಗೆ ಎಸ್.ಪಿ ಅಶೋಕ್ ಕೆ.ವಿ ಭೇಟಿ ಮಾಡಿ ಪರಿಶೀಲನೆ ನಡೆಸಿದರು.
+ There are no comments
Add yours