ಸೋಮವಾರ ತುಮಕೂರು ಬಂದ್ ಕ್ಯಾನ್ಸಲ್! ಏಕೆ? ಏನಾಯಿತು?
Tumkurnews
ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಸೋಮವಾರ(ಜೂ.3)ದಂದು ಕರೆ ನೀಡಲು ಉದ್ದೇಶಿಸಿದ್ದ ತುಮಕೂರು ಬಂದ್ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲಾಧಿಕಾರಿಗಳು ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ ತಾತ್ಕಾಲಿಕವಾಗಿ ತಡೆ ನೀಡಿದ್ದಾರೆ ಹಾಗೂ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಕಾರಣಗಳಿಂದ ಸೋಮವಾರ ಕರೆ ನೀಡಲು ಉದ್ದೇಶಿಸಿದ್ದ ತುಮಕೂರು ಬಂದ್ ಅನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಸೋಮವಾರ ತುಮಕೂರು ಬಂದ್
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯು ಮುಂದಿನ ದಿನಗಳಲ್ಲಿ ಹೋರಾಟದ ಮುಂದುವರಿದ ಭಾಗವಾಗಿ ವಿಧಾನಸೌಧ ಚಲೋ ಹಾಗೂ ಜಿಲ್ಲಾ ಬಂದ್ ಕರೆ ನೀಡಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಜೂನ್ 6ರ ನಂತರ ಬಂದ್ ಆಚರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಧನಿಯಾ ಕುಮಾರ್ ತಿಳಿಸಿದ್ದಾರೆ.
ಹೇಮಾವತಿ ಕೆನಾಲ್ ವಿರೋಧಿಸಿ ವಿಧಾನಸೌಧ ಚಲೋ, ಡಿಸಿ ಕಚೇರಿ ಎದುರು ಧರಣಿ, ಜಿಲ್ಲಾ ಬಂದ್ ನಿರ್ಧಾರ
+ There are no comments
Add yours