ಗುಡುಗು, ಸಿಡಿಲು ಸಹಿತ ಮಳೆ: ಜಿಲ್ಲೆಗೆ ಬಂತು ಜೀವ ಕಳೆ
Tumkurnews
ತುಮಕೂರು: ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಗುಡುಗು ಸಿಡಿಲು ಸಹಿತ ಮಳೆಯಾಗಿದೆ.
ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಉಂಟಾಗಿ ಸಂಜೆ ವೇಳೆಗೆ ಗುಡುಗು, ಮಿಂಚು ಆರಂಭವಾಗಿದೆ. ಸೂರ್ಯಾಸ್ತದ ಸಮಯದಲ್ಲಿ ಶುರುವಾದ ಮಳೆ ಭಾರೀ ಶಬ್ದದ ಗುಡುಗು ಹಾಗೂ ಪ್ರಖರವಾದ ಬೆಳಕು ಬೀರುವ ಮಿಂಚು ಸಹಿತ ಸುಮಾರು ಎರಡು ತಾಸು ಜೋರಾಗಿ ಸುರಿದಿದೆ.
ಕೃಷಿ ಚಟುವಟಿಕೆ ಆರಂಭ:
ಆರೇಳು ದಿನಗಳ ಬಿಡುವಿನ ಬಳಿಕ ಪುನಃ ಮಳೆ ಆರಂಭವಾಗಿರುವುದು ಜನರಲ್ಲಿ ಸಂತಸ ಮೂಡಿಸಿದೆ. ಜಿಲ್ಲೆಯಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಬಿತ್ತನೆ ಬೀಜ, ರಸ ಗೊಬ್ಬರ ಹಾಗೂ ಕೀಟ ನಾಶಕಗಳ ಸಮರ್ಪಕ ಪೂರೈಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮಳೆಯು ಸಕಲ ಜೀವರಾಶಿಗಳಲ್ಲಿ ಜೀವಕಳೆ ತಂದಿರುವುದರಂತು ನಿಜ.
+ There are no comments
Add yours