ಮಧುಗಿರಿ: 5 ಗ್ರಾಮಗಳ ಕುಡಿಯುವ ನೀರಿನಲ್ಲಿ ಹೆಚ್ಚಿನ ಕ್ಲೋರೈಡ್ ಮತ್ತು ನೈಟ್ರೆಡ್ ಅಂಶ ಪತ್ತೆ: ಅಪಾಯವೇನು?

1 min read

 

ಮಧುಗಿರಿ: 5 ಗ್ರಾಮಗಳ ಕುಡಿಯುವ ನೀರಿನಲ್ಲಿ ಹೆಚ್ಚಿನ ಕ್ಲೋರೈಡ್ ಮತ್ತು ನೈಟ್ರೆಡ್ ಅಂಶ ಪತ್ತೆ: ಅಪಾಯವೇನು?

Tumkurnews
ತುಮಕೂರು: ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಆಗುವಂತಹ ಹೆರಿಗೆಗಳು, ಮಕ್ಕಳ ಚಿಕಿತ್ಸೆಗಳು, ರೋಗಿಗಳ ವಿವರಗಳು, ಸಾವು, ಸಾಂಕ್ರಾಮಿಕ ರೋಗಗಳ ಕುರಿತ ನಿಖರವಾದ ವರದಿಯನ್ನು ನಿಗದಿತ ಅವಧಿಯಲ್ಲಿ ಸಲ್ಲಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಮಂಜುನಾಥ್ ಅವರಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕೊರಟಗೆರೆ, ಮಧುಗಿರಿ, ಶಿರಾ ತಾಲೂಕಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ: ಇಲ್ಲಿದೆ ಸಮಗ್ರ ವರದಿ
ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಮಾತನಾಡಿ, ದೊಡ್ಡ ಎಣ್ಣಿಗೆರೆ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲಿಸಲಾಗಿದೆ. ಪ್ರಸ್ತುತ ತಾಲ್ಲೂಕಿನ 380 ಜಲ ಮೂಲಗಳ ಕುಡಿಯುವ ನೀರನ್ನು ಪರೀಕ್ಷಿಸಿ, ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದರು.

ಕೊರಟಗೆರೆ ತಾಲ್ಲೂಕು ಆರೋಗ್ಯಾಧಿಕಾರಿ ಮಾತನಾಡಿ, ತಾಲ್ಲೂಕಿನಲ್ಲಿ 1255 ಕುಡಿಯುವ ನೀರಿನ ಮೂಲಗಳಿದ್ದು, ಪ್ರಸ್ತುತ 452 ಜಲಮೂಲಗಳನ್ನು ಪರೀಕ್ಷಿಸಲಾಗಿದೆ ಎಂದರು. ಮಧುಗಿರಿ ತಾಲ್ಲೂಕಿನ 652 ಜಲಮೂಲಗಳಲ್ಲಿ 178 ಜಲಮೂಲಗಳನ್ನು ಪರೀಕ್ಷಿಸಲಾಗಿದ್ದು, 55 ಜಲಮೂಲಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರಲ್ಲಿ 5 ಗ್ರಾಮಗಳ ಕುಡಿಯುವ ನೀರಿನಲ್ಲಿ ಹೆಚ್ಚಿನ ಕ್ಲೋರೈಡ್ ಮತ್ತು ನೈಟ್ರೆಡ್ ಅಂಶಗಳು ಕಂಡು ಬಂದಿದೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದರು.

ತುಮಕೂರು: ರಾಜೀನಾಮೆಗೆ ವ್ಯಾಪಕ ಒತ್ತಾಯ: ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದ ಕೆ‌.ಎನ್ ರಾಜಣ್ಣ!
ಜಿಲ್ಲಾಧಿಕಾರಿ ಮಾತನಾಡಿ, ಕುಡಿಯುವ ನೀರಿನಲ್ಲಿ ಹೆಚ್ಚಿನ ಕ್ಲೋರೈಡ್ ಮತ್ತು ನೈಟ್ರೆಡ್ ಕಂಡುಬರುವಂತಹ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಸಂಸ್ಕರಿಸಿದ ನೀರನ್ನು ಸಾರ್ವಜನಿಕರಿಗೆ ಪೂರೈಸಬೇಕು ಎಂದು ತಿಳಿಸಿದರು. ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಘಟಕಗಳು, ಕೊಳವೆ ಬಾವಿಗಳು, ಕೆರೆಗಳು ಸೇರಿದಂತೆ ಮೊದಲಾದ ವಿವಿಧ ಜಲಮೂಲಗಳಿಂದ ಸಂಗ್ರಹಿಸಿದ ನೀರನ್ನು ಇಂದೇ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಪಡೆಯಬೇಕು. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಜಿಲ್ಲೆಯ ಎಲ್ಲಾ ಇಒಗಳಿಗೆ ಸೂಚಿಸಿದರು.

ಶಿರಾಗೇಟ್ ರಸ್ತೆ ಸಂಚಾರ ಮುಕ್ತ
ನೈಟ್ರೇಟ್ ಪರಿಣಾಮವೇನು?
ನೀರಿನಲ್ಲಿ ಹೆಚ್ಚಿನ ನೈಟ್ರೇಟ್ ಮಟ್ಟಗಳು ವಿಶೇಷವಾಗಿ ಶಿಶುಗಳಲ್ಲಿ ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ನೈಟ್ರೇಟ್ ಮಾಲಿನ್ಯವು ಗಂಭೀರ ಸಮಸ್ಯೆಯಾಗಿದೆ. ಕುಡಿಯುವ ನೀರಿನಲ್ಲಿ ನೈಟ್ರೇಟ್‌ಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಮತ್ತು ರೋಗಗಳಂತಹ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಮನುಷ್ಯರಿಗೆ ಮಾತ್ರವಲ್ಲ ಜಾನುವಾರುಗಳಿಗೂ ಅಪಾಯಕಾರಿ.

ಪ್ರಜ್ವಲ್ ರೇವಣ್ಣನ ವಿಡಿಯೋವನ್ನು ಪತ್ರಕರ್ತರ ಮೊಬೈಲ್’ನಲ್ಲಿ ನೋಡಿದ ಗೃಹ ಸಚಿವ ಪರಮೇಶ್ವರ್: ವಿಡಿಯೋ
ಕ್ಲೋರೈಡ್ ನೀರಿನ ಅಪಾಯವೇನು?: ಕ್ಲೋರೈಡ್ ಅಂಶವು ನೀರಿನ ಸ್ವಾದದ ಮೇಲೆ ಪರಿಣಾಮ ಬೀರಲಿದೆ. ಸೋಡಿಯಂ ಕ್ಲೋರೈಡ್ ಹೆಚ್ಚಾಗಿರುವ ನೀರನ್ನು ತೋಟಗಾರಿಕೆಗೆ ಬಳಸಿ ಅದರಿಂದ ಬರುವ ಉತ್ಪನ್ನಗಳನ್ನು ಸೇವನೆ ಮಾಡುವುದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಲಿದೆ.

ತುಮಕೂರು: ಸಚಿವರಾದ ಡಾ.ಜಿ ಪರಮೇಶ್ವರ್, ಕೆ.ಎನ್ ರಾಜಣ್ಣ ರಾಜೀನಾಮೆ ನೀಡಲಿ

About The Author

You May Also Like

More From Author

+ There are no comments

Add yours