ಪ್ರಜ್ವಲ್ ರೇವಣ್ಣನ ವಿಡಿಯೋವನ್ನು ಪತ್ರಕರ್ತರ ಮೊಬೈಲ್’ನಲ್ಲಿ ನೋಡಿದ ಸಚಿವ ಪರಮೇಶ್ವರ್
Tumkurnews
ತುಮಕೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಜ್ಞಾತ ಸ್ಥಳದಿಂದ ಬಿಡುಗಡೆ ಮಾಡಿರುವ ವಿಡಿಯೋವನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಪತ್ರಕರ್ತರ ಮೊಬೈಲ್’ನಲ್ಲಿ ವೀಕ್ಷಿಸಿದರು.
ಪ್ರಜ್ವಲ್ ರೇವಣ್ಣ ಹೇಳಿದ್ದೇನು? ಇಲ್ಲಿದೆ ವಿಡಿಯೋ
ನಗರದಲ್ಲಿ ಸೋಮವಾರ ಪರಮೇಶ್ವರ್’ರನ್ನು ಭೇಟಿಯಾದ ಪತ್ರಕರ್ತರು, ಪ್ರಜ್ವಲ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ಕೇಳಿದರು. ಆಗ ‘ನಾನಿನ್ನೂ ವಿಡಿಯೋ ಹೇಳಿಕೆ ನೋಡಿಲ್ಲ’ ಎಂದ ಪರಮೇಶ್ವರ್’ಗೆ ಪತ್ರಕರ್ತರು ತಮ್ಮ ಮೊಬೈಲ್’ನಲ್ಲೇ ಪ್ರಜ್ವಲ್ ವಿಡಿಯೋ ತೋರಿಸಿದರು. ಬಳಿಕ ಪ್ರತಿಕ್ರಿಯಿಸಿದ ಅವರು, ನಾನು ವೀಡಿಯೋ ನೋಡಿರಲಿಲ್ಲ. ನನಗೆ ಎರಡು ಗಂಟೆ ಮುಂಚೆ ಸುದ್ದಿ ಬಂತು. ಈ ರೀತಿಯಾಗಿ ಅವರು ಹೇಳಿಕೆ ಕೊಟ್ಟಿದ್ದಾರೆ ಅಂತ. ನಾನು ಬೇರೊಂದು ಕೆಲಸಕ್ಕೆ ಬಂದಿದ್ದೆ. ಹಾಗಾಗಿ ವೀಡಿಯೋ ನೋಡಿರಲಿಲ್ಲ. ಇವಾಗ ವೀಡಿಯೋ ನೋಡಿದಾಗ ಕನ್ಫಮ್ ಆಯ್ತು ಎಂದರು. ಅವರು ಏನಾದ್ರು ಹೇಳಿಕೊಳ್ಳಲಿ. ಅವರು ಹೇಳಿದಕ್ಕೆ ನಾನು ಉತ್ತರ ಕೊಡಲಿಕ್ಕೆ ಹೋಗಲ್ಲ. ಎಸ್ ಐಟಿ ಮುಂದೆ ಬಂದ ಮೇಲೆ ಅದೇನ್ ಆಗ್ಬೇಕು ಆಗುತ್ತೆ ಎಂದು ಪ್ರತಿಕ್ರಿಯಿಸಿದರು.
ಶಿರಾಗೇಟ್ ರಸ್ತೆ ಸಂಚಾರ ಮುಕ್ತ
ಅಜ್ಞಾತ ಸ್ಥಳದಿಂದ ವೀಡಿಯೋ ಮಾಡಿರುವುದನ್ನು ಪತ್ತೆ ಹಚ್ಚುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮಗೆ ನಿಮಗೆ ಆ ಮಾಹಿತಿ ಗೊತ್ತಿರಲ್ಲ. ಎಸ್ಐಟಿ ಅವರಿಗೆ ಗೊತ್ತಿರುತ್ತೆ. ಅವರನ್ನು ಯಾವ ರೀತಿ ಕಸ್ಟಡಿಗೆ ತಗೋಬೇಕು. ಯಾವ ರೀತಿಯಾಗಿ ಕಾನೂನಿನ ಚೌಕಟ್ಟಿಗೆ ತರಬೇಕು ಅಂತ ಡಿಸೈಡ್ ಮಾಡ್ತಾರೆ ಎಂದು ತಿಳಿಸಿದರು.
ತುಮಕೂರು: ರಾಜೀನಾಮೆಗೆ ವ್ಯಾಪಕ ಒತ್ತಾಯ: ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದ ಕೆ.ಎನ್ ರಾಜಣ್ಣ!
ಪ್ರಜ್ವಲ್ ರೇವಣ್ಣ ನನ್ನದೇನು ತಪ್ಪಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಎಲ್ಲರೂ ಹಾಗೆ ಹೇಳ್ತಾರೆ, ನಮ್ಮದು ತಪ್ಪಿಲ್ಲ ಅಂತ. ತಪ್ಪಿಲ್ಲ ಅಂದ್ರೆ, ತಪ್ಪು ಮಾಡಿದೋರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತೆ. ಎಸ್ ಐಟಿ ಅವರು ಎಲ್ಲಾ ಮಾಹಿತಿ ಕಲೆಹಾಕಿ ಹೇಳ್ತಾರೆ. ಮಾಹಿತಿ ಆಧಾರದ ಮೇಲೆ ಯಾರದ್ದು ತಪ್ಪು, ಯಾರದ್ದು ತಪ್ಪಿಲ್ಲ ಅಂತ ಆ ಆಧಾರದ ಮೇಲೆ ಹೇಳ್ತಾರೆ ಎಂದರು.
ಪ್ರಜ್ವಲ್ ರೇವಣ್ಣ ಮೇ 31ಕ್ಕೂ ಬಂದಿಲ್ಲ ಅಂದ್ರೆ ಮುಂದೆ ಏನಾಗುತ್ತೆ ನೋಡೋಣಾ. ಇನ್ನ ಮೂರು-ನಾಲ್ಕು ದಿನ ಇರೋದು ಅಷ್ಟೇ ಎಂದು ತುಮಕೂರಿನಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ತುಮಕೂರು: ಸಚಿವರಾದ ಡಾ.ಜಿ ಪರಮೇಶ್ವರ್, ಕೆ.ಎನ್ ರಾಜಣ್ಣ ರಾಜೀನಾಮೆ ನೀಡಲಿ
+ There are no comments
Add yours