ಕಾಂಗ್ರೆಸ್ ಗೆಲ್ಲುವುದರಿಂದ ಸದನದ ಪಾವಿತ್ರ್ಯತೆಗೆ ದಕ್ಕೆ ಬರುತ್ತದೆ: ವಿಜಯೇಂದ್ರ
Tumkurnews
ತುಮಕೂರು: ಅಧಿಕಾರದ ಬಲದಿಂದ ನಾವು ಗೆಲ್ಲಬಹುದು ಎಂದು ಕಾಂಗ್ರೆಸ್’ನವರು ತಿಳಿದಿದ್ದಾರೆ. ಅವರು ಗೆಲ್ಲುವುದರಿಂದ ಸದನದ ಪಾವಿತ್ರ್ಯತೆಗೆ ದಕ್ಕೆ ಬರುವುದು ನಿಶ್ಚಿತ. ಹಾಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ವೈ.ಎ ನಾರಾಯಣ ಸ್ವಾಮಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮನವಿ ಮಾಡಿದರು.
ತುಮಕೂರು: ಚುನಾವಣೆ ಗೆಲ್ಲಲು ನಾಲ್ವರು ನಾರಾಯಣ ಸ್ವಾಮಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ: ವಿಜಯೇಂದ್ರ ಆರೋಪ
ನಗರದಲ್ಲಿ ಶನಿವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರ ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ ನಾರಾಯಣ ಸ್ವಾಮಿ ಪರ ಮತಯಾಚಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಇದ್ದಾಗ ಅನೇಕ ಪ್ರೌಢ ಶಾಲೆಗಳು, ಪಾಲಿಟೆಕ್ನಿಕ್ ಶಾಲೆಗಳನ್ನು ತೆರೆಯಲಾಗಿತ್ತು. ಶಿಕ್ಷಣಕ್ಕೆ ಅತಿ ಹೆಚ್ಚು ಒತ್ತು ಕೊಟ್ಟಿದ್ದು ಬಿಜೆಪಿ. ಶಿಕ್ಷಕರಿಗೆ ನ್ಯಾಯ ಕೊಟ್ಟಿದ್ದು ನಮ್ಮ ಸರ್ಕಾರ ಇದ್ದಾಗ. ಶಿಕ್ಷಕರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದು ಬಿಜೆಪಿ ಎಂದು ತಿಳಿಸಿದರು.
ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ಬಗ್ಗೆ ಬಿಗ್ ಅಪ್ಡೇಟ್! ಆಕಾಂಕ್ಷಿಗಳಿಗೆ ಶುಭ ಸುದ್ದಿ
ಶಿಕ್ಷಣ ಕ್ಷೇತ್ರವನ್ನು ಕಾಂಗ್ರೆಸ್ ಸರ್ಕಾರ ಕಲುಷಿತ ಮಾಡುವ ಕೆಲಸ ಮಾಡುತ್ತಿದೆ. ನಾವು ಎನ್.ಇ.ಪಿಯನ್ನು ಜಾರಿಗೆ ತಂದು ಯುವಕರಿಗೆ ಶಕ್ತಿ ನೀಡುವ ಕೆಲಸ ಮಾಡಿದರೆ ಕಾಂಗ್ರೆಸ್ ಸರ್ಕಾರ ಅದನ್ನು ನಿಲ್ಲಿಸಿದೆ. ದಾವಣಗೆರೆಯಲ್ಲಿ ಓರ್ವ ಶಿಕ್ಷಕರು, ದಯವಿಟ್ಟು ಮೊದಲು ಈಗಿನ ಶಿಕ್ಷಣ ಸಚಿವರನ್ನು ಬದಲಾವಣೆ ಮಾಡಿಸಿ ಅಂತಾ ಮನವಿ ಮಾಡಿದರು. ಇಂತಹ ಬೇಜವಾಬ್ದಾರಿ ಸಚಿವರು ಸಿಕ್ಕಿದ್ದು ಬೇಸರದ ಸಂಗತಿ ಎಂದರು.
ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ: ಈ ತಪ್ಪು ಮಾಡಿದರೆ 6 ತಿಂಗಳು ಜೈಲು
+ There are no comments
Add yours