ತುಮಕೂರು: ಚುನಾವಣೆ ಗೆಲ್ಲಲು ನಾಲ್ವರು ನಾರಾಯಣ ಸ್ವಾಮಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ: ವಿಜಯೇಂದ್ರ ಆರೋಪ

1 min read

ಚುನಾವಣೆ ಗೆಲ್ಲಲು ನಾಲ್ವರು ನಾರಾಯಣ ಸ್ವಾಮಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ: ವಿಜಯೇಂದ್ರ ಆರೋಪ

Tumkurnews
ತುಮಕೂರು: ಹೇಗಾದರೂ ಮಾಡಿ ಈ ಬಾರಿಯಾದರೂ ವೈ.ಎ ನಾರಾಯಣ ಸ್ವಾಮಿ ಅವರನ್ನು ಸೋಲಿಸಬೇಕೆಂದು ಕಾಂಗ್ರೆಸ್ ಪಕ್ಷವು ನಾಲ್ವರು ನಾರಾಯಣ ಸ್ವಾಮಿಯನ್ನು ಚುನಾವಣೆ ಕಣಕ್ಕಿಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ‌ ವಿಜಯೇಂದ್ರ ಆರೋಪಿಸಿದರು.

ಸಿಎಂ ಬರ ಪರಿಶೀಲನೆ ಸಭೆ: ತುಮಕೂರು ಜಿಲ್ಲೆಯ ನಿರ್ವಹಣೆ ಬಗ್ಗೆ ಮೆಚ್ಚುಗೆ
ನಗರದಲ್ಲಿ ಶನಿವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಪಕ್ಷವು ಕುತಂತ್ರ ಮಾಡುತ್ತಿದೆ. ಆದರೆ ಶಿಕ್ಷಕ ಮತದಾರರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ವೈ.ಎ ನಾರಾಯಣಸ್ವಾಮಿ ಅವರನ್ನು ಕೈ ಹಿಡಿಯುವ ವಿಶ್ವಾಸವಿದೆ ಎಂದರು.
ಜೆಡಿಎಸ್, ಬಿಜೆಪಿ ಇದ್ದಾಗ ಶಿಕ್ಷಣಕ್ಕೆ ಸಾಕಷ್ಟು ಆದ್ಯತೆ ನೀಡಲಾಗಿತ್ತು. ಕೋವಿಡ್ ಬಂದಾಗ ಬಿಜೆಪಿ ಸರ್ಕಾರ ಶಿಕ್ಷಕರಿಗೆ ಸಂಬಳವನ್ನು ನಿಲ್ಲಿಸದೇ ಯಡಿಯೂರಪ್ಪ ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಸಂಬಳ ಕಟ್ ಮಾಡಲಾಗಿತ್ತು. ಆದರೆ ರಾಜ್ಯದಲ್ಲಿ ಯಡಿಯೂರಪ್ಪ ಮಾತ್ರ ಕಟ್ ಮಾಡದೆ ಸಂಬಳ ನೀಡಿದ್ದರು ಎಂದು ತಿಳಿಸಿದರು.

ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆ ಬಗ್ಗೆ ಬಿಗ್ ಅಪ್ಡೇಟ್! ಆಕಾಂಕ್ಷಿಗಳಿಗೆ ಶುಭ ಸುದ್ದಿ

About The Author

You May Also Like

More From Author

+ There are no comments

Add yours