“ಸ್ವಚ್ಛ ತುಮಕೂರು ಸ್ಪರ್ಧೆ” ಅರ್ಜಿ ಆಹ್ವಾನ
Tumkurnews
ತುಮಕೂರು; ಸ್ವಚ್ಛ ಸರ್ವೇಕ್ಷಣ್-2023 ಪ್ರಪಂಚದ ಅತಿ ದೊಡ್ಡ ಶುಚಿತ್ವ ಸ್ಪರ್ಧೆಯಲ್ಲಿ ತುಮಕೂರು ನಗರವೂ ಕೂಡ ಭಾಗವಹಿಸುತ್ತಿದ್ದು, ತುಮಕೂರು ಮಹಾನಗರಪಾಲಿಕೆಯು ನಗರವನ್ನು ಸ್ವಚ್ಛನಗರವನ್ನಾಗಿಸುವ ಉದ್ದೇಶದಿಂದ ಸಾರ್ವಜನಿಕರ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ ಸಲುವಾಗಿ ”ಸ್ವಚ್ಛ ತುಮಕೂರು ಸ್ಪರ್ಧೆ”ಯನ್ನು ಹಮ್ಮಿಕೊಂಡಿದ್ದು, ಅರ್ಜಿ ಆಹ್ವಾನಿಸಲಾಗಿದೆ.
ಸ್ಪರ್ಧೆಯು ಐದು ವಿಭಾಗಗಗಳಲ್ಲಿ ನಡೆಯಲಿದ್ದು, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ಹೋಟೆಲ್, ಮಾರುಕಟ್ಟೆ ಸಂಘಗಳು ಹಾಗೂ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಅರ್ಜಿ ಸಲ್ಲಿಸಬಹುದಾಗಿದೆ.
ಕೋಟ್ಯಾಂತರ ರೂ. ಬಾಕಿ ಉಳಿಸಿಕೊಂಡ ಸರ್ಕಾರಿ ಇಲಾಖೆಗಳು: ಬಹಿರಂಗ ಪ್ರಕಟಣೆ ಹೊರಡಿಸಿದ ಬೆಸ್ಕಾಂ!
ಆಸಕ್ತರು, ಸೆಪ್ಟೆಂಬರ್ 27, 2023ರೊಳಗಾಗಿ ಪಾಲಿಕೆಯ ಜಾಲತಾಣ www.tumkurcity.mrc.gov.in ಮೂಲಕ ಅರ್ಜಿ ಡೌನ್‍ಲೋಡ್ ಮಾಡಿ ಇಮೇಲ್ itstaff_ulb_tumkur@yahoo.com ಮೂಲಕ ಅಥವಾ ಖುದ್ದಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 0816-2271200/ 2272200ಯನ್ನು ಸಂಪರ್ಕಿಸಬಹುದಾಗಿದೆ ಎಂದು ಪಾಲಿಕೆ ಆಯುಕ್ತರು ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಜನರನ್ನು ಕಚೇರಿಗಳಿಗೆ ಅಲೆದಾಡಿಸುವ ಕೆಲಸ ಆಗಬಾರದು: ಡಾ.ಜಿ ಪರಮೇಶ್ವರ್
+ There are no comments
Add yours