ಕೋಟ್ಯಾಂತರ ರೂ. ಬಾಕಿ ಉಳಿಸಿಕೊಂಡ ಸರ್ಕಾರಿ ಇಲಾಖೆಗಳು: ಬಹಿರಂಗ ಪ್ರಕಟಣೆ ಹೊರಡಿಸಿದ ಬೆಸ್ಕಾಂ!

1 min read

 

ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಕಟಣೆ

Tumkurnews
ತುಮಕೂರು: ಬೆವಿಕಂ ತುಮಕೂರು ವಿಭಾಗ ವ್ಯಾಪ್ತಿಗೆ ಒಳಪಡುವ ತುಮಕೂರು ಮತ್ತು ಗುಬ್ಬಿ ತಾಲ್ಲೂಕಿನ ಸರ್ಕಾರಿ ಇಲಾಖೆಗಳು ಆಗಸ್ಟ್-2023ರ ಅಂತ್ಯಕ್ಕೆ ಹೊಂದಿರುವ ಕಂದಾಯ ಬಾಕಿಯನ್ನು ತುರ್ತಾಗಿ ಪಾವತಿಸುವುದು. ಬಾಕಿ ಇರುವ ಹಣ ಪಾವತಿ ಮಾಡದೇ ಇದ್ದಲ್ಲಿ ವಿದ್ಯುತ್ ನಿಲುಗಡೆಯಂತಹ ಕ್ರಮಗಳಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ, ಅನಾನುಕೂಲತೆಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಜವಾಬ್ದಾರಿ ಆಗಿರುವುದಿಲ್ಲ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ-17955.76ಲಕ್ಷ ರೂ., ಕಾವೇರಿ ನೀರಾವರಿ ನಿಗಮ-758.00ಲಕ್ಷ ರೂ.ಗಳು, ನಗರಾಭಿವೃದ್ಧಿ ಇಲಾಖೆ-585.00ಲಕ್ಷ ರೂ.ಗಳು, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ-71.72ಲಕ್ಷ ರೂ.ಗಳು, ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ 46.00ಲಕ್ಷ ರೂ., ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ-13.26ಲಕ್ಷ ರೂ., ಗೃಹ ಇಲಾಖೆ-8.19ಲಕ್ಷ ರೂ., ಶಿಕ್ಷಣ ಇಲಾಖೆ-6.44ಲಕ್ಷ ರೂ., ಕಂದಾಯ ಇಲಾಖೆ-4.76ಲಕ್ಷ ರೂ., ಸಮಾಜ ಕಲ್ಯಾಣ ಇಲಾಖೆ-3.54ಲಕ್ಷ ರೂ.ಗಳು, ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ-1.82ಲಕ್ಷ ರೂ., ಲೋಕೋಪಯೋಗಿ ಇಲಾಖೆ-1.58ಲಕ್ಷ ರೂ.ಗಳು ಬಾಕಿ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

ಜನರನ್ನು ಕಚೇರಿಗಳಿಗೆ ಅಲೆದಾಡಿಸುವ ಕೆಲಸ ಆಗಬಾರದು: ಡಾ.ಜಿ ಪರಮೇಶ್ವರ್

You May Also Like

More From Author

+ There are no comments

Add yours