ತುಮಕೂರಿನಲ್ಲಿ ಭರ್ಜರಿ ಮಳೆ: ದಿಕ್ಕಾಪಾಲಾಗಿ ಓಡಿದ ವಿದ್ಯಾರ್ಥಿಗಳು
Tumkurnews
ತುಮಕೂರು: ನಗರದಲ್ಲಿ ಗುರುವಾರ ಸಂಜೆ ಭರ್ಜರಿ ಮಳೆಯಾಯಿತು. ದಿಢೀರನೆ ಸುರಿದ ಮಳೆಯಿಂದ ರಕ್ಷಿಸಿಕೊಳ್ಳಲು ಜನರು ಸುರಕ್ಷಿತ ಸ್ಥಳಗಳತ್ತ ಓಡುತ್ತಿದ್ದ ದೃಶ್ಯ ಕಂಡು ಬಂದಿತು.
ಇನ್ನೂ 5 ದಿನ ಭಾರೀ ಮಳೆ: 8 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್
ಶಾಲಾಕಾಲೇಜುಗಳು ಬಿಡುವ ಹೊತ್ತಿಗೆ ಸರಿಯಾಗಿ ಮಳೆಯಾಗಿದ್ದರಿಂದ ವಿದ್ಯಾರ್ಥಿಗಳು ಮಳೆಯಲ್ಲಿ ನೆನೆದುಕೊಂಡೇ ಮನೆಗೆ ಹೋಗುವಂತಾಯಿತು. ಇನ್ನೂ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿದರು. ಆದರೆ ಇಬ್ಬರು ವಿದ್ಯಾರ್ಥಿನಿಯರು ಸುರಿಯವ ಮಳೆಯನ್ನು ಲೆಕ್ಕಿಸದೆ ಸಮಾಧಾನದಿಂದ ನೆನೆದುಕೊಂಡೇ ನಡೆಯುತ್ತಿದ್ದ ದೃಶ್ಯ ಗಮನ ಸೆಳೆಯಿತು.
ಮಳೆಯ ವಿಡಿಯೋ ಇಲ್ಲಿದೆ ನೋಡಿ♦
+ There are no comments
Add yours