ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಹೇಗಿದೆ ನೋಡಿ: ವಿಡಿಯೋ
Tumkurnews
ಕೊರಟಗೆರೆ: ತಾಲ್ಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದಾಸೋಹ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿ ನೆರವೇರುತ್ತಿದ್ದು, ಭಕ್ತರ ಗಮನ ಸೆಳೆಯುತ್ತಿದೆ.
ಹೊಸದಾಗಿ ನಿರ್ಮಾಣವಾಗಿರುವ ದಾಸೋಹ ಕಟ್ಟಡದಲ್ಲಿ ಭಕ್ತರಿಗೆ ಪ್ರಸಾದ(ಊಟ) ನೀಡುತ್ತಿದ್ದು, ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಸದ್ಯ ಟ್ರಸ್ಟ್ ಮೂಲಕ ದೇವಾಲಯದ ನಿರ್ವಹಣೆ ನಡೆಯುತ್ತಿದ್ದು, ಊಟದ ವ್ಯವಸ್ಥೆಯಲ್ಲಿ ರುಚಿ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತಿದೆ.
ಗೃಹಲಕ್ಷ್ಮಿ; ಜಿಲ್ಲೆಯ 1.35ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ: ಉಳಿದವರಿಗೆ ಯಾವಾಗ? ಇಲ್ಲಿದೆ ಮಾಹಿತಿ
ಗಮನ ಸೆಳೆಯುವ ಮಕ್ಕಳ ಶಿಸ್ತು: ದಾಸೋಹ ನಿಲಯಕ್ಕೆ ನಿತ್ಯ ಮಧ್ಯಾಹ್ನ ಊಟಕ್ಕೆ ಬರುವ ವಿದ್ಯಾರ್ಥಿಗಳ ಶಿಸ್ತು ಗಮನ ಸೆಳೆಯುತ್ತದೆ. ದೇವಾಲಯದ ಶಿಕ್ಷಣ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಸಾಲಾಗಿ ಬಂದು ಶಿಸ್ತಿನಿಂದ ಕುಳಿತು ಊಟ ಮಾಡುತ್ತಾರೆ. ಪ್ರತಿದಿನ ಪಾಳಿಯಂತೆ ವಿದ್ಯಾರ್ಥಿಗಳು ಸ್ವತಃ ಊಟ ಬಡಿಸುವ ಕೆಲಸ ಮಾಡುತ್ತಾರೆ. ಊಟಕ್ಕೂ ಮುನ್ನ ಮಕ್ಕಳ ಪ್ರಾರ್ಥನೆ ಕೇಳಲು ಇನ್ನೂ ಹಿತವಾಗಿರುತ್ತದೆ. ಒಟ್ಟಾರೆಯಾಗಿ ಗೊರವನಹಳ್ಳಿ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ದಾಸೋಹ ವ್ಯವಸ್ಥೆ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
ಗೃಹಲಕ್ಷ್ಮಿಗೆ ಈಗಲೂ ನೋಂದಣಿ ಮಾಡಿಸಬಹುದೇ?; ಮುರಳೀಧರ ಹಾಲಪ್ಪ ಸ್ಪಷ್ಟನೆ
+ There are no comments
Add yours