Tumkurnews
ತುಮಕೂರು: ನಗರ ಸೇರಿದಂತೆ ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಭಾನುವಾರ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಬಸ್’ಗಳು ತುಂಬಿ ತುಳುಕುತ್ತಿದ್ದವು.
ಶಕ್ತಿ ಯೋಜನೆ ಜಾರಿಯಾದಾಗಿನಿಂದಲೂ ಕೆ.ಎಸ್.ಆರ್.ಟಿ.ಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಕೆ.ಎಸ್.ಆರ್.ಟಿ.ಸಿ ಬಸ್’ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.
ಗೃಹಲಕ್ಷ್ಮಿ; ಜಿಲ್ಲೆಯ 1.35ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ: ಉಳಿದವರಿಗೆ ಯಾವಾಗ? ಇಲ್ಲಿದೆ ಮಾಹಿತಿ
ಸೀಟು ಸಿಗುವುದಿಲ್ಲ: ಮಹಿಳಾ ಪ್ರಯಾಣಿಕರು ಹೆಚ್ಚಾಗಿರುವುದರಿಂದ ವಾರದ ಕೊನೆಯ ದಿನಗಳಲ್ಲಿ ಅಂದರೆ ವೀಕೆಂಡ್ ಮತ್ತು ವಾರದ ಆರಂಭದ ದಿನಗಳಲ್ಲಿ ಬಸ್’ಗಳಲ್ಲಿ ಸೀಟು ಹಿಡಿಯುವುದೇ ದುಸ್ಸಾಹಸ ಎಂಬಂತಾಗಿದೆ. ಬಸ್ಸಿನಲ್ಲಿ ಸೀಟು ಸಿಗದೇ ಮಹಿಳೆಯರು, ವಯೋವೃದ್ದರು ಸೇರಿದಂತೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಭಾನುವಾರ ಜಿಲ್ಲೆಯ ಬಹುತೇಕ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಕಂಡು ಬಂದರು.
ತುಮಕೂರು: ತಿಪಟೂರಿನಲ್ಲಿ ವಿಶ್ವ ತೆಂಗು ದಿನಾಚರಣೆ
ಉದ್ದದ ಸಾಲು: ತುಮಕೂರು ಜಿಲ್ಲಾ ಕೇಂದ್ರದ ಬಸ್ ನಿಲ್ದಾಣದಲ್ಲಿ ಭಾನುವಾರ ಜನಸಾಗರವೇ ಕಂಡು ಬಂದಿತು. ಶಿವಮೊಗ್ಗ ಅಂಕಣದಲ್ಲಿ ಒಂದು ಬಸ್ ಬಂದರೆ ನಾಲ್ಕು ಬಸ್’ಗೆ ಆಗುವಷ್ಟು ಜನರು ಕಾಯುತ್ತಿದ್ದರು. ಇನ್ನೂ ಬೆಂಗಳೂರು ಅಂಕಣದಲ್ಲಿ ಎರಡು ಸಾಲಿನ ಸರತಿಯಲ್ಲಿ ಪ್ರಯಾಣಿಕರು ಬಸ್ ಹತ್ತಲು ಕಾಯುತ್ತಿದ್ದರು. ಮೊದಲೆಲ್ಲಾ ಗುಂಪು ಗುಂಪಾಗಿ ಜನ ನಾಮುಂದು ತಾಮುಂದು ಎಂಬಂತೆ ಬಸ್ ಹತ್ತುತ್ತಿದ್ದರು. ಆದರೆ ಶಕ್ತಿ ಯೋಜನೆ ಬಳಿಕ ಬೆಂಗಳೂರು ಅಂಕಣದಲ್ಲಿ ಬಸ್ ಪ್ರಯಾಣಿಕರು ಸರತಿಯಲ್ಲಿ ಬಂದು ಬಸ್ ಹತ್ತುವ ವ್ಯವಸ್ಥೆ ಮಾಡಲಾಗಿದೆ. ನಿಲ್ದಾಣದ ಭದ್ರತಾ ಸಿಬ್ಬಂದಿ ಕಿಕ್ಕಿರಿಯುವ ಪ್ರಯಾಣಿಕರನ್ನು ಸಂಬಾಳಿಸಲು ಹರಸಾಹಸ ಪಡುತ್ತಿದ್ದಾರೆ.
ಪ್ರಯಾಣಿಕರು ಹೈರಾಣು: ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಶಕ್ತಿ ಯೋಜನೆಯ ಸದ್ಬಳಕೆಯ ನಡುವೆಯೂ ಪ್ರಯಾಣಿಕರು ಬಸ್ ಪ್ರಯಾಣ ಮಾಡಲು ಹರಸಾಹಸ ಪಡುತ್ತಿದ್ದಾರೆ. ಬೆಂಗಳೂರು ಮತ್ತಿತರ ಕಡೆಗಳಲ್ಲಿ ಉದ್ಯೋಗ ನಿಮಿತ್ತವಾಗಿ ಇರುವ ಪ್ರಯಾಣಿಕರು ವಾರದ ರಜೆಗೆ ಊರಿಗೆ ಬರಬೇಕು ಎಂದು ಯೋಚನೆ ಮಾಡುವುದಕ್ಕಿಂತ ಮುಂಚೆ ಬಸ್ಸಿನಲ್ಲಿ ಸೀಟು ಸಿಗುತ್ತದೆಯೇ? ಇಲ್ಲವೇ? ಎಂದು ಯೋಚನೆ ಮಾಡುವಂತಾಗಿದೆ. ಊರಿನಿಂದ ಹೊರಡುವಾಗಲೂ ಸೀಟಿನ ಬಗ್ಗೆಯೇ ಚಿಂತೆ ಮಾಡುವಂತಾಗಿದೆ. ಒಟ್ಟಾರೆಯಾಗಿ ಶಕ್ತಿ ಯೋಜನೆ ಕೆ.ಎಸ್.ಆರ್.ಟಿ.ಸಿಗೆ ಹೊಸ ಚೈತನ್ಯ ನೀಡಿದ್ದರೆ ಪ್ರಯಾಣಿಕರನ್ನು ಹೈರಾಣು ಮಾಡಿರುವುದಂತೂ ನಿಜ.
(ಚಿತ್ರ: ತುಮಕೂರು ಬಸ್ ನಿಲ್ದಾಣದಲ್ಲಿ ಬೆಂಗಳೂರು ಬಸ್ ಹತ್ತಲು ಸರತಿಯಲ್ಲಿ ನಿಂತಿರುವ ಪ್ರಯಾಣಿಕರು)
+ There are no comments
Add yours