ದಕ್ಷಿಣ ಭಾರತ ವಲಯ ಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್; 8 ಕ್ರೀಡಾಪಟುಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ
Tumkurnews
ತುಮಕೂರು: ಕಳೆದ ಆಗಸ್ಟ್ 18ರಿಂದ 22ನೇ ತಾರೀಕಿನವರೆಗೆ ಕೇರಳದ ತಿರುವನಂತಪುರದಲ್ಲಿ ನಡೆದ ದಕ್ಷಿಣ ಭಾರತ ವಲಯ ಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ತುಮಕೂರಿನ ವಿವೇಕಾನಂದ ಶೂಟಿಂಗ್ ಅಕಾಡೆಮಿಯ 22 ಕ್ರೀಡಾಪಟುಗಳು ಭಾಗವಹಿಸಿದ್ದು, 2 ಚಿನ್ನದ ಪದಕ, ಒಂದು ಕಂಚಿನ ಪದಕ ಪಡೆಯುವುದರೊಂದಿಗೆ, 8 ಕ್ರೀಡಾಪಟುಗಳು ಮುಂದಿನ ಡಿಸೆಂಬರ್’ನಲ್ಲಿ ನಡೆಯುವ ರಾಷ್ಟ್ರಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್’ನಲ್ಲಿ ಭಾಗವಹಿಸಲು ಆರ್ಹತೆ ಪಡೆದಿದ್ದಾರೆ.
ಗೃಹಲಕ್ಷ್ಮಿ; ಜಿಲ್ಲೆಯ 1.35ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ: ಉಳಿದವರಿಗೆ ಯಾವಾಗ? ಇಲ್ಲಿದೆ ಮಾಹಿತಿ
ದಕ್ಷಿಣ ಭಾರತ ವಲಯ ಮಟ್ಟದ ಶೂಟಿಂಗ್ ಚಾಂಪಿಯನ್ ಶಿಫ್‍ನಲ್ಲಿ 2 ಚಿನ್ನದ ಪದಕ ವಿಜೇತರಾದ ಕಿರಣ್ ನಂದನ್ ಮತ್ತು ಕಂಚಿನ ಪದಕ ವಿಜೇತರಾದ ನಿತೀನ್ ಹಾಗೂ ರಾಷ್ಟ್ರಮಟ್ಟಕ್ಕೆ ಆರ್ಹತೆ ಪಡೆದ ತನ್ಮಯಿಗೌಡ, ಆದಿಲ್ ಗೌಡ, ವಿಜಯೇಂದ್ರ, ಚಿನ್ಮಯಿ, ಕೃಷ್ಣ, ರಕ್ಷಿತ್‍ರಾಜ್, ಚಿರಾಯು, ಹರ್ಷ ಅವರುಗಳನ್ನು ಇಂದು ವಿವೇಕಾನಂದ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅಭಿನಂದಿಸಲಾಯಿತು.
ಗೃಹಲಕ್ಷ್ಮಿಗೆ ಈಗಲೂ ನೋಂದಣಿ ಮಾಡಿಸಬಹುದೇ?; ಮುರಳೀಧರ ಹಾಲಪ್ಪ ಸ್ಪಷ್ಟನೆ
ಪದಕ ವಿಜೇತರು ಹಾಗೂ ರಾಷ್ಟ್ರೀಯ ಚಾಂಪಿಯನ್ ಶಿಪ್’ನಲ್ಲಿ ಪಾಲ್ಗೊಳ್ಳಲು ಆರ್ಹತೆ ಪಡೆದ 8 ಜನ ಶೂಟಿಂಗ್ ಕ್ರೀಡಾಪಟುಗಳನ್ನು ಅಭಿನಂದಿಸಿ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ಶೂಟಿಂಗ್ ಇಂದು ಹೆಚ್ಚು ಸದ್ದು ಮಾಡುತ್ತಿರುವ ಕ್ರೀಡೆಯಾಗಿದೆ. ಮಹಾನಗರಗಳಿಗೆ ಸಿಮೀತವಾಗಿದ್ದ ಶೂಟಿಂಗ್ ಸ್ಪರ್ಧೆಯನ್ನು ವಿವೇಕಾನಂದ ಸ್ಟೋರ್ಟ್ ಅಂಡ್ ಕಲ್ಚರಲ್ ಅಸೋಸಿಯೇಷನ್‍ನ ಅನಿಲ್ ತುಮಕೂರಿನಲ್ಲಿ ಶೂಟಿಂಗ್ ಆಕಾಡೆಮಿ ಆರಂಭಿಸಿ, ಕ್ರೀಡಾಪಟುಗಳಿಗೆ ಅವರ ಇತಿಮಿತಿಯಲ್ಲಿಯೇ ತರಬೇತಿ ನೀಡಿ, ಇದುವರೆಗೂ ಸುಮಾರು 28 ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ, ವಿವಿಧ ಪದಕಗಳನ್ನು ತರುವಂತೆ ಮಾಡಿದ್ದಾರೆ. ಅವರನ್ನು ಜಿಲ್ಲಾಡಳಿತ ಪ್ರೋತ್ಸಾಹಿಸಬೇಕು ಎಂದರು. ಕನ್ನಡ ಸೇನೆಯ ಅಧ್ಯಕ್ಷ ಹಾಗೂ ಕ್ರೀಡಾ ಪ್ರೋತ್ಸಾಹಕ ಧನಿಯಕುಮಾರ್ ಮಾತನಾಡಿ, ತುಮಕೂರು ಕಲೆ, ಸಂಗೀತ, ಸಾಹಿತ್ಯ, ಶಿಕ್ಷಣದಲ್ಲಿ ಮುಂದಿರುವ ರೀತಿಯಲ್ಲಿಯೇ ಕ್ರೀಡೆಯಲ್ಲಿಯೂ ಸಾಧನೆಯಡೆಗೆ ದಾಪುಗಾಲು ಹಾಕುತ್ತಿದೆ. ಕಬ್ಬಡಿ, ಪುಟ್ಬಾಲ್, ಖೋ-ಕೋ ನಂತಹ ಕ್ರೀಡೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ತುಮಕೂರು ಹೆಸರು ಮಾಡಿದೆ. ಇತ್ತೀಚಿನ ದಿನಗಳಲ್ಲಿ ಶೂಟಿಂಗ್‍ನಲ್ಲಿ ತುಮಕೂರಿನ ವಿವೇಕಾನಂದ ಶೂಟಿಂಗ್ ಆಕಾಡೆಮಿ ಎತ್ತರಕ್ಕೆ ಬೆಳೆಯುತ್ತಿದ್ದು, ಇದರ ಹಿಂದಿನ ಶಕ್ತಿ ತರಬೇತುದಾರರಾದ ಅನಿಲ್. ಕಡು ಬಡವರ ಮಕ್ಕಳು ಇವರ ಶೂಟಿಂಗ್ ಅಕಾಡೆಮಿ ಸೇರಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದರು.
ರಾಜ್ಯ ಮಟ್ಟದ ರೈಫಲ್ ಶೂಟಿಂಗ್; ತುಮಕೂರಿಗೆ 21 ಪದಕ
ಈ ವೇಳೆ ವಿವೇಕಾನಂದ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್‍ನ ಅನಿಲ್, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ತರಬೇತುದಾರ ಇಸ್ಮಾಯಿಲ್, ಹೊಸಕೋಟೆ ನಟರಾಜು ಸೇರಿದಂತೆ ಕ್ರೀಡಾಪಟುಗಳು ಉಪಸ್ಥಿತರಿದ್ದರು.
+ There are no comments
Add yours