ಸರಣಿ ಅಪಘಾತದಲ್ಲಿ ಇಬ್ಬರು ದಾರುಣ ಸಾವು: ಸ್ವಂತ ಊರಿಗೆ ಹೊರಟವರು ಸಾವಿನ ಮನೆ ಸೇರಿದರು

1 min read

ಸರಣಿ ಅಪಘಾತದಲ್ಲಿ ಇಬ್ಬರು ದಾರುಣ ಸಾವು: ಸ್ವಂತ ಊರಿಗೆ ಹೊರಟವರು ಸಾವಿನ ಮನೆ ಸೇರಿದರು

Tumkurnews
ತುಮಕೂರು; ಜಿಲ್ಲೆಯ ಶಿರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನಿವೃತ್ತರಾಗಿ ಮನೆಗೆ ತೆರಳುತ್ತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.
ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿ ಶನಿವಾರ ಬೆಳಗಿನ ಜಾವ ನಡೆದ ಸರಣಿ ಅಪಘಾತದಲ್ಲಿ ಟಾಟಾ ಏಸ್, ಕ್ಯಾಂಟರ್ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿಯಾಗಿದೆ.
ಅಪಘಾತದಲ್ಲಿ ಟಾಟಾ ಏಸ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಕಲ್ಬುರ್ಗಿ ಜಿಲ್ಲೆ ಅರಳಗುಡಿ ಗ್ರಾಮದ ಭೀಮಾಬಾಯಿ (70) ಹಾಗೂ ಮಹಾಂತಪ್ಪ (50) ಎಂದು ಗುರುತಿಸಲಾಗಿದೆ.

ಗೃಹಲಕ್ಷ್ಮಿಗೆ ಈಗಲೂ ನೋಂದಣಿ ಮಾಡಿಸಬಹುದೇ?; ಮುರಳೀಧರ ಹಾಲಪ್ಪ ಸ್ಪಷ್ಟನೆ
ಉದ್ಯೋಗ ನಿಮಿತ್ತ ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದ ಇವರು ನಿವೃತ್ತಿಯಾದ ಹಿನ್ನೆಲೆಯಲ್ಲಿ ಮನೆಯ ಸಾಮಾನುಗಳನ್ನು ಟಾಟಾ ಏಸ್’ನಲ್ಲಿ ತುಂಬಿಕೊಂಡು ತಮ್ಮ ಸ್ವಗ್ರಾಮಕ್ಕೆ ಮರಳುತ್ತಿದ್ದರು.
ಅಪಘಾತ ನಡೆಸಿದ್ದೇಗೆ?: ಶಿರಾದ ಚಿಕ್ಕನಹಳ್ಳಿ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ವಾಹನ ದಟ್ಟಣೆ ಉಂಟಾಗಿತ್ತು. ಈ ವೇಳೆ ಮುಂದೆ ಹೋಗುತ್ತಿದ್ದ ಕ್ಯಾಂಟರ್‌ಗೆ ಹಿಂದಿನಿಂದ ಬಂದ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ಅದೇ ಕ್ಷಣ ಹಿಂಬದಿಯಿಂದ ಟಾಟಾ ಏಸ್‌ಗೆ ಖಾಸಗಿ ಬಸ್’ವೊಂದು ಬಂದು ಡಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತದಲ್ಲಿ ಕ್ಯಾಂಟರ್‌ ಮತ್ತು ಬಸ್‌ ನಡುವೆ ಸಿಲುಕಿಕೊಂಡು ಟಾಟಾ ಏಸ್’ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗೃಹಲಕ್ಷ್ಮಿ; ಜಿಲ್ಲೆಯ 1.35ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ: ಉಳಿದವರಿಗೆ ಯಾವಾಗ? ಇಲ್ಲಿದೆ ಮಾಹಿತಿ
ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಸ್ಥಳೀಯ ಕಳ್ಳಂಬೆಳ್ಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

About The Author

You May Also Like

More From Author

+ There are no comments

Add yours