ಕುಣಿಗಲ್: ಇಬ್ಬರು ನಾಪತ್ತೆ, ಪ್ರಕರಣಗಳು ದಾಖಲು

1 min read

 

ಕುಣಿಗಲ್: ಇಬ್ಬರು ನಾಪತ್ತೆ, ಪ್ರಕರಣಗಳು ದಾಖಲು

Tumkurnews
ತುಮಕೂರು: ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕವಾದ ಕಾಣೆಯಾದ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇನ್ಸ್’ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣ 1:- ಕೊತ್ತಗೆರೆ ಹೋಬಳಿ ವಾಣಿಗೆರೆ ಗ್ರಾಮದ ಸುಮಾರು 80 ವರ್ಷದ ಮಹಿಳೆ ಚೆನ್ನಮ್ಮ ಅವರು ಆಗಸ್ಟ್ 10 ರಂದು ಬೆಳಿಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ತೋಟದಲ್ಲಿ ತಿರುಗಾಡಲು ಹೋದವರು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಈಕೆಯು 5.3 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡುಮುಖವನ್ನು ಹೊಂದಿರುತ್ತಾರೆ.
ಪ್ರಕರಣ-2:- ಕೊತ್ತಗೆರೆ ಹೋಬಳಿ ಕರೇಶಾನಯ್ಯನಪಾಳ್ಯ ಗ್ರಾಮದ ಸುಮಾರು 71 ವರ್ಷದ ತಿಮ್ಮಮ್ಮ ಅವರು ಜುಲೈ 04, 2023ರಂದು ಮನೆಯಲ್ಲಿ ಜಗಳ ಮಾಡಿಕೊಂಡು ಸಂಜೆ 4 ಗಂಟೆ ಸಮಯದಲ್ಲಿ ಮನೆಯಿಂದ ಹೊರಗಡೆ ಹೋದವರು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ ಎಂದು ದೂರು ದಾಖಲಾಗಿರುತ್ತದೆ. ಈಕೆಯು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದಾರೆ. ಕಾಣೆಯಾದ ಇವರ ಬಗ್ಗೆ ಸುಳಿವು ಸಿಕ್ಕವರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಅವರು ತಿಳಿಸಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆಯಡಿ ವಶಪಡಿಸಿಕೊಳ್ಳಲಾದ ವಸ್ತುಗಳ ಹರಾಜು

About The Author

You May Also Like

More From Author

+ There are no comments

Add yours