ವಶಪಡಿಸಿಕೊಂಡ ಆಹಾರ ಕಿಟ್: ಆ.31ರಂದು ಬಹಿರಂಗ ಹರಾಜು
Tumkurnews
ತುಮಕೂರು: ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023ರ ನೀತಿ ಸಂಹಿತೆ ಉಲ್ಲಂಘನೆಯಡಿ ವಶಪಡಿಸಿಕೊಳ್ಳಲಾದ ಆಹಾರ ಕಿಟ್ ಸೇರಿದಂತೆ ಇತರೆ ವಸ್ತುಗಳನ್ನು ಆಗಸ್ಟ್ 31ರ ಬೆಳಿಗ್ಗೆ 11 ಗಂಟೆಗೆ ಶಿರಾ ರಸ್ತೆ ಡಿ.ಸಿ ಬಂಗಲೆ ಬಳಿ ಇರುವ ಕೆಎಫ್‍ಸಿಎಸ್‍ಸಿ ಸಗಟು ಮಳಿಗೆಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ತಹಶೀಲ್ದಾರ್ ಸಿದ್ದೇಶ್ ತಿಳಿಸಿದ್ದಾರೆ.
ಉಪ್ಪಾರಹಳ್ಳಿ ಪಿಎನ್‍ಕೆ ಟೌನ್‍ಶಿಪ್ ಖಾಲಿ ನಿವೇಶನದಲ್ಲಿದ್ದ ಒಟ್ಟು 469 ಆಹಾರ ಕಿಟ್, ತುಮಕೂರು ನಗರದ ವೀರಸಾಗರ್ ಬಡಾವಣೆಯ ಹಫೀಜ್ ಎಂಬುವವರು ತಮ್ಮ ಮನೆಯ ಪಕ್ಕದಲ್ಲಿ ದಿನಸಿ ಸಾಮಗ್ರಿಗಳು ತುಂಬಿರುವ 132-ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಬೊಮ್ಮನಹಳ್ಳಿ ಬಾಬು ಎಂದು ಹೆಸರಿರುವ 12 ಫುಡ್ ಕಿಟ್ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ 26 ಕೆ.ಜಿ. ತೂಕದ ರಾಯಲ್ ಬುಲೆಟ್ ಎಂದು ನಮೂದಾಗಿರುವ 35 ಪ್ಲಾಸ್ಟಿಕ್ ಚೀಲದಲ್ಲಿರುವ ಅಕ್ಕಿ, ಸನ್ ಸೂಪರ್ ರಿಫೈಡ್ ಆಯಿಲ್ 15 ಲೀ. ಪ್ರಮಾಣದ 12 ಟನ್, 1 ಬರ್ನಲ್‍ವುಳ್ಳ 1 ಕಬ್ಬಿಣದ ಗ್ಯಾಸ್ ಸ್ಟೌವ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಗತ್ಯ ವಸ್ತುಗಳ ಕಾಯ್ದೆ 1955 ಕಲಂ 6ಎ ಅಡಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಶಪಡಿಸಿಕೊಂಡ ಆಹಾರ ಕಿಟ್‍ಗಳನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶಿರಾ ರಸ್ತೆ ಡಿ.ಸಿ.ಬಂಗಲೆ ಬಳಿ ಇರುವ ಕೆಎಫ್‍ಸಿಎಸ್‍ಸಿ ಸಗಟು ಮಳಿಗೆಯಲ್ಲಿ ಸುರಕ್ಷಿತವಾಗಿ ದಾಸ್ತಾನು ಮಾಡಲಾಗಿದೆ. ದಾಸ್ತಾನಿನ ಮಾದರಿಯನ್ನು ಹರಾಜಿನ ದಿನದಂದು ಹರಾಜಿನಲ್ಲಿ ಭಾಗವಹಿಸುವವರು ಪರಿಶೀಲಿಸಲು ಅವಕಾಶವಿದ್ದು, ಆಸಕ್ತರು ನಿಗದಿತ ಸಮಯಕ್ಕೆ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ. ಬಹಿರಂಗ ಹರಾಜು ದಿನ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದ ಬಿಡ್‍ದಾರರು ಶೇ.50ರಷ್ಟು ಮೊತ್ತವನ್ನು ಪಾವತಿಸಬೇಕು. ಬಿಡ್ ದಿನ ಹೊರತುಪಡಿಸಿ 3 ದಿನಗಳೊಳಗಾಗಿ ಉಳಿದ ಮೊತ್ತವನ್ನು ಪಾವತಿಸಿ ದಾಸ್ತಾನನ್ನು ಎತ್ತುವಳಿ ಮಾಡತಕ್ಕದ್ದು. ಇಲ್ಲವಾದಲ್ಲಿ ಶೇ. 50ರಷ್ಟು ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಬಿಡ್‍ದಾರರು ತಮ್ಮ ದಾಖಲೆ ಹಾಗೂ ಗುರುತಿನ ಚೀಟಿಯೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸತಕ್ಕದ್ದು ಎಂದು ಅವರು ತಿಳಿಸಿದ್ದಾರೆ.
(ಚಿತ್ರ; .ಬೊಮ್ಮನಹಳ್ಳಿ ಬಾಬು)
+ There are no comments
Add yours