ಅಕ್ರಮ ಆಸ್ತಿ ಗಳಿಕೆ ಆರೋಪ; ಟುಡಾ ಜಂಟಿ ನಿರ್ದೇಶಕ ನಾಗರಾಜು ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
Tumkurnews.in
ತುಮಕೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ(ಟುಡಾ)ದ ಯೋಜನೆ ವಿಭಾಗದ ಜಂಟಿ ನಿರ್ದೇಶಕ ನಾಗರಾಜು ಮನೆ ಮೇಲೆ ಲೋಕಾಯುಕ್ತ ಅಧಿಕಾರಿ ಗುರುವಾರ ದಾಳಿ ನಡೆಸಿದ್ದಾರೆ.
ಶಕ್ತಿ ಯೋಜನೆಗೆ ಬ್ರೇಕ್!?; ರಾಜ್ಯದ ಮಹಿಳೆಯರಿಗೆ ಶಾಕ್; ಸರ್ಕಾರದಿಂದ ಸರಣಿ ಹೇಳಿಕೆ ಬಿಡುಗಡೆ
ಟುಡಾದ ಪ್ಲಾನಿಂಗ್ ಸೆಕ್ಷನ್’ನ ಜಂಟಿ ನಿರ್ದೇಶಕ ನಾಗರಾಜು ಅವರ ದೇವನೂರು ಚರ್ಚ್ ಸಮೀಪದ ಮನೆ ಹಾಗೂ ಅರಸೀಕೆರೆ ಮನೆ ಮತ್ತು ತುಮಕೂರಿನ ಕಚೇರಿ ಮೇಲೆ ಏಕಕಾಲದಲ್ಲಿ ಮೂರು ಕಡೆ ದಾಳಿ ನಡೆಸಲಾಗಿದೆ. ಪ್ರಾಥಮಿಕವಾಗಿ ದಾಖಲಾತಿಗಳನ್ನು ಪರಿಶೀಲಿಸಿರುವ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಕಲೆ ಹಾಕುತ್ತಿದ್ದಾರೆ.
ತುಮಕೂರಿನಲ್ಲಿ ಲೋಕಾಯುಕ್ತ ದಾಳಿ; ರೆಡ್ ಹ್ಯಾಂಡ್ ಸಿಕ್ಕು ಬಿದ್ದ ಅಧಿಕಾರಿ
+ There are no comments
Add yours