ಸಾರ್ವಜನಿಕ ಸ್ಥಳದಲ್ಲಿ ಲಾಂಗ್’ನಿಂದ ಹಲ್ಲೆ; ನಾಲ್ವರ ಬಂಧನ

1 min read

 

ಸಾರ್ವಜನಿಕ ಸ್ಥಳದಲ್ಲಿ ಲಾಂಗ್’ನಿಂದ ಹಲ್ಲೆ; ಕುಣಿಗಲ್’ನಲ್ಲಿ ನಾಲ್ವರ ಬಂಧನ

Tumkurnews.in
ತುಮಕೂರು: ಹಾಡಹಗಲೇ ವ್ಯಕ್ತಿಯೋರ್ವರ ಮೇಲೆ ಲಾಂಗು, ಮಚ್ಚಿನಿಂದ ಹಲ್ಲೆ ನಡೆಸಿ ಕುಣಿಗಲ್’ನಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಹೆಣ್ಣಿನ ಧ್ವನಿ ಬಳಸಿ 41 ಲಕ್ಷ ಸುಲಿಗೆ! ತುಮಕೂರು ಮೂಲದ ಯುವಕ ಬಂಧನ
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆಗಸ್ಟ್ 3ರಂದು ಹಲ್ಲೆ ಘಟನೆ ನಡೆದಿತ್ತು. ಮೇಸ್ತ್ರಿ ಗೌಡನ ಪಾಳ್ಯದ ಜಗದೀಶ್ ಹಾಗೂ ಆತನ ಸ್ನೇಹಿತೆ ರೇಣುಕಾ ಎಂಬುವವರು ಕುಣಿಗಲ್ ಕಡೆಗೆ ಹೋಗುತ್ತಿದ್ದಾಗ ಮಲ್ಲಾಘಟ್ಟದ ಎಲ್.ಐ.ಸಿ ಕಚೇರಿ ಮುಂಭಾಗ ಕೂತರಹಳ್ಳಿಯ ಆಕಾಶ್, ಜಗದೀಶ್ ಮೇಲೆ ಲಾಂಗ್’ನಿಂದ ಹಲ್ಲೆ ನಡೆಸಿ ತನ್ನ ಸಹಚರರೊಂದಿಗೆ ಪರಾರಿಯಾಗಿದ್ದನು. ಈ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕುಣಿಗಲ್ ಪೊಲೀಸರು ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೂತರಹಳ್ಳಿಯ ಕೆ.ಡಿ ಆಕಾಶ್(23), ಬಿಳಿದೇವಾಲಯ ಗ್ರಾಮದ ಸಾಗರ್(23), ಚಿಕ್ಕಕಲ್ಯಾ ಗ್ರಾಮದ ರಾಜಣ್ಣ(48), ಕುಣಿಗಲ್ ಮಾವನಕಟ್ಟೆ ಪಾಳ್ಯ ಆಶ್ರಯ ಕಾಲೋನಿ ನಿವಾಸಿ ಎಂ.ಎಸ್ ಪ್ರಸಾದ್(25) ಬಂಧಿತರು.

ಇನ್ಮುಂದೆ ವಾರದಲ್ಲಿ 2 ದಿನ ಬ್ಯಾಂಕ್ ರಜೆ?!; ಏನಿದು ಸುದ್ದಿ?

About The Author

You May Also Like

More From Author

+ There are no comments

Add yours