ಗೃಹಲಕ್ಷ್ಮಿ ಉದ್ಘಾಟನೆ ಯಾವತ್ತು?; ದಿನಾಂಕ ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ
Tumkurnews.in
ಬೆಂಗಳೂರು: ಮನೆಯೊಡತಿಗೆ ಮಾಸಿಕ 2000 ರೂ. ಮಾಸಾಶನ ನೀಡುವ ಗೃಹಲಕ್ಷೀ ಯೋಜನೆಯನ್ನು ಆ.20ರಂದು ಬೆಳಗಾವಿಯಲ್ಲಿ ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶಾಸಕರೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಗೃಹಲಕ್ಷ್ಮಿ ಉದ್ಘಾಟನೆ ಬಗ್ಗೆ ಮಾತನಾಡಿದರು.
ಗೃಹಲಕ್ಷ್ಮಿ ಉದ್ಘಾಟನೆಗೆ ಕಾಂಗ್ರೆಸ್ ವರಿಷ್ಠ ಹಾಗೂ ಸಂಸದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಬರುವ ಸಾಧ್ಯತೆ ಇದೆ.
ಗೃಹಲಕ್ಷ್ಮಿಗೆ ಅಭೂತಪೂರ್ವ ಸ್ಪಂದನೆ; ಎಲ್ಲಿ, ಎಷ್ಟು ನೋಂದಣಿಯಾಗಿದೆ ಗೊತ್ತೇ?
ಯಶಸ್ಸಿಗೆ ಸಿಎಂ ಸೂಚನೆ: ಗೃಹಲಕ್ಷ್ಮಿ ಯಶಸ್ಸಿಗೆ ಶ್ರಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರು, ಸಚಿವರಿಗೆ ಸೂಚನೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಶಾಸಕರೊಂದಿಗೆ ವೀಡಿಯೋ ಸಂವಾದ ನಡೆಸಿದ ಅವರು, ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಜನೋಪಯೋಗಿ ಯೋಜನೆಯಾಗುತ್ತಿರುವ ಗೃಹ ಲಕ್ಷೀ ಯೋಜನೆಯನ್ನು ಶಾಸಕರು, ಸಚಿವರು ಒಟ್ಟಿಗೆ ಸೇರಿ ಯಶಸ್ವಿಗೊಳಿಸಬೇಕು. ಯೋಜನೆ ಕುರಿತು ಅವರವರ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಚಾರ ಮಾಡಬೇಕು ಎಂದು ಸೂಚಿಸಿದರು.
ಗೃಹ ಲಕ್ಷ್ಮಿಗೆ ಚಾಲನೆ; ನೋಂದಣಿಗೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ
+ There are no comments
Add yours