ಪತಿಯನ್ನು ಕಪ್ಪು ಎಂದು ನಿಂದಿಸುವುದು ಕ್ರೌರ್ಯ; ವಿಚ್ಛೇದನ ಮಂಜೂರು ಮಾಡಿದ ಕೋರ್ಟ್

1 min read

 

ಪತಿಯನ್ನು ಕಪ್ಪು ಎಂದು ಸದಾ ನಿಂದಿಸುತ್ತಿದ್ದ ಪತ್ನಿ; ವಿಚ್ಛೇದನ ಮಂಜೂರು ಮಾಡಿದ ಕೋರ್ಟ್

Tumkurnews.in
ಬೆಂಗಳೂರು; ಪತಿ ಅಥವಾ ಪತ್ನಿ ಪರಸ್ಪರ ಯಾರನ್ನೇ ಆದರೂ ಮೈ ಬಣ್ಣದ ಆಧಾರದ ಮೇಲೆ ಟೀಕಿಸುವುದು ಕ್ರೌರ್ಯಕ್ಕೆ ಸಮಾನ, ಇದು ವಿವಾಹ ವಿಚ್ಛೇದನಕ್ಕೂ ಕಾರಣವಾಗುತ್ತದೆ!

ಇನ್ಮುಂದೆ ವಾರದಲ್ಲಿ 2 ದಿನ ಬ್ಯಾಂಕ್ ರಜೆ?!; ಏನಿದು ಸುದ್ದಿ?
ಹೌದು ಇಂತದ್ದೇ ಒಂದು ಪ್ರಕರಣದಲ್ಲಿ ಪತಿಯನ್ನು ಸದಾ ಕಪ್ಪು ಬಣ್ಣದವನು ಎಂದು ಪತ್ನಿ ಟೀಕಿಸುತ್ತಿದ್ದ ಕಾರಣ ಹಾಗೂ ಇದೇ ಕಾರಣಕ್ಕಾಗಿ ಪತಿಯಿಂದ ದೂರ ಇದ್ದದ್ದಿಂದ ಪತ್ನಿಯ ವರ್ತನೆಯನ್ನು ಕ್ರೌರ್ಯ ಎಂದು ಪರಿಗಣಿಸಿದ ಹೈಕೋರ್ಟ್ ವಿವಾಹವನ್ನು ಅಸಿಂಧುಗೊಳಿಸಿ ಪತಿಗೆ ವಿಚ್ಛೇದನ ಮಂಜೂರು ಮಾಡಿದೆ.

ಹೆಣ್ಣಿನ ಧ್ವನಿ ಬಳಸಿ 41 ಲಕ್ಷ ಸುಲಿಗೆ! ತುಮಕೂರು ಮೂಲದ ಯುವಕ ಬಂಧನ
ಪ್ರಕರಣದಲ್ಲಿ ವಿಚ್ಛೇದನ ನೀಡಲು ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾ.ಅಲೋಕ್ ಅರಾಧೆ ಮತ್ತು ನ್ಯಾ.ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.
ಪ್ರಕರಣದ ಕುರಿತು ಪೀಠವು, ಪತ್ನಿ ಪತಿಗೆ ಕಪ್ಪು ಬಣ್ಣದವನು ಎಂದು ಯಾವಾಗಲೂ ಅವಮಾನ ಮಾಡುತ್ತಿದ್ದರು. ಅಲ್ಲದೇ ಪತಿಯ ಮೇಲೆ ಅಕ್ರಮ ಸಂಬಂಧದ ಸುಳ್ಳು ಆರೋಪ ಮಾಡಿದ್ದಾರೆ. ಇದು ಕ್ರೌರ್ಯದ ವ್ಯಾಪ್ತಿಗೆ ಬರಲಿದೆ ಎಂದು ಅಭಿಪ್ರಾಯ ಪಟ್ಟಿದೆ.

ತುಮಕೂರಿನಲ್ಲಿ ಲೋಕಾಯುಕ್ತ ದಾಳಿ; ರೆಡ್ ಹ್ಯಾಂಡ್ ಸಿಕ್ಕು ಬಿದ್ದ ಅಧಿಕಾರಿ
ಇದಲ್ಲದೇ ಪತ್ನಿಯು ಪತಿ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದರು. ಹಲವು ವರ್ಷಗಳಿಂದ ಪತಿಯ ಸಂಪರ್ಕದಲ್ಲಿ ಇಲ್ಲದ ಪತ್ನಿ, ಪತಿಯೊಂದಿಗೆ ಜೀವಿಸಲು ಸಿದ್ಧಳಿರುವುದಾಗಿ ಆದರೆ ಯಾವುದೇ ಕಾರಣಕ್ಕೂ ಅವರ ವಿರುದ್ದ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯವುದಿಲ್ಲವೆಂದು ಹೇಳಿದ್ದರು. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನ್ಯಾಯಾಲಯವು ಪತ್ನಿಗೆ ಪತಿಯೊಂದಿಗೆ ಜೀವನ ನಡೆಸುವ ಆಸಕ್ತಿ ಇಲ್ಲ ಎಂದು ಮನಗಂಡು ಪತ್ನಿಯ ಕ್ರೌರ್ಯದ ಆಧಾರದ ಮೇಲೆ ಪತಿಗೆ ವಿಚ್ಛೇದನ ನೀಡಬಹುದು ಎಂದಿದೆ.

ಗೃಹಲಕ್ಷ್ಮಿಗೆ ಅಭೂತಪೂರ್ವ ಸ್ಪಂದನೆ; ಎಲ್ಲಿ, ಎಷ್ಟು ನೋಂದಣಿಯಾಗಿದೆ ಗೊತ್ತೇ?

About The Author

You May Also Like

More From Author

+ There are no comments

Add yours