ಗೃಹಲಕ್ಷ್ಮಿ ಯೋಜನೆಗೆ ಅಭೂತಪೂರ್ವ ಸ್ಪಂದನೆ; ನೋಂದಣಿ ಎಷ್ಟಾಗಿದೆ ಗೊತ್ತೇ?
Tumkurnews.in
ತುಮಕೂರು; ರಾಜ್ಯ ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನ ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಅಭೂತಪೂರ್ವ ಸ್ಪಂದನೆ ದೊರೆತಿದೆ.
ಯೋಜನೆಯಡಿ ನೋಂದಣಿಗೆ ಜುಲೈ 19ರಂದು ಸರ್ಕಾರ ಚಾಲನೆ ನೀಡಿತ್ತು, ಈವರೆಗೆ ರಾಜ್ಯದ ಶೇ.75ರಷ್ಟು ಅರ್ಹ(ಮನೆಯೊಡತಿ) ಮಹಿಳೆಯರು ಈಗಾಗಲೇ ಯೋಜನೆಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಎಲ್ಲಿ, ಎಷ್ಟು ನೋಂದಣಿ?:
ಹಾವೇರಿ ಜಿಲ್ಲೆ – ಶೇ.83, ಬೆಂಗಳೂರು ನಗರ ಜಿಲ್ಲೆ- ಶೇ.61
ಧಾರವಾಡ ಜಿಲ್ಲೆ- ಶೇ.76, ಮಂಡ್ಯ ಜಿಲ್ಲೆ- ಶೇ.82, ಚಿಕ್ಕಮಗಳೂರು-ಶೇ.82 ಚಾಮರಾಜನಗರ, ಚಿತ್ರದುರ್ಗ, ಗದಗ ಶೇ.81, ಹಾಸನ, ಉತ್ತರ ಕನ್ನಡ-ಶೇ.80 ಕೊಪ್ಪಳ, ಬಾಗಲಕೋಟೆ, ತುಮಕೂರು-ಶೇ.79, ಮೈಸೂರು, ಶಿವಮೊಗ್ಗ, ಬೆಳಗಾವಿ, ಬೀದರ್ -ಶೇ.78, ಬಳ್ಳಾರಿ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ-ಶೇ.77, ವಿಜಯಪುರ-ಶೇ.76, ವಿಜಯನಗರ-ಶೇ.75, ದಕ್ಷಿಣ ಕನ್ನಡ, ಕಲಬುರಗಿ, ಕೊಡಗು-ಶೇ.74, ಉಡುಪಿ, ಯಾದಗಿರಿ ಜಿಲ್ಲೆಗಳಲ್ಲಿ ಶೇ.73 ರಷ್ಟು ನೋಂದಣಿಯಾಗಿದೆ ಎಂದು ತಿಳಿದುಬಂದಿದೆ.
ಗೃಹ ಲಕ್ಷ್ಮಿಗೆ ಚಾಲನೆ; ನೋಂದಣಿಗೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ
+ There are no comments
Add yours