ಡಾ.ಜಿ ಪರಮೇಶ್ವರ್ ಬೆಂಬಲಿಸಿ ಬೀದಿಗಳಿದ ಕೈ ಪಡೆ
Tumkurnews
ತುಮಕೂರು; ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ್ ಯುವ ಸೈನ್ಯ(ರಿ), ಛಲವಾದಿ ಮಹಾಸಭಾ(ರಿ),ಡಾ.ಜಿ ಪರಮೇಶ್ವರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಮುಖಂಡರು ನಗರದ ಟೌನ್ ಹಾಲ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಬಿ.ಜಿ.ಎಸ್ ವೃತ್ತ(ಟೌನ್‍ಹಾಲ್)ದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ವಿದ್ಯಾವಂತ, ದಕ್ಷ, ಪ್ರಾಮಾಣಿಕ ಮತ್ತು ಸಜ್ಜನ ರಾಜಕಾರಣಿ ಡಾ.ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಆರ್ಹತೆಗಳಿವೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈ ಬಾರಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯವಿದೆ ಎಂಬುದನ್ನು ಸಾಬೀತು ಪಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪಾಲಿಕೆಯ ವಿರೋಧಪಕ್ಷದ ಮಾಜಿ ನಾಯಕ ಜೆ.ಕುಮಾರ್, ಇಂದು ಕಾಂಗ್ರೆಸ್ ಪಕ್ಷ ಅತ್ಯಂತ ಬಹುಮತಗಳಿಸಿ,ಅಧಿಕಾರದ ಚುಕ್ಕಾಣಿ ಹಿಡಿಯುವ ಹಂತಕ್ಕೆ ಬಂದಿದೆ ಎಂದರೆ,ಅದರ ಹಿಂದೆ ಡಾ.ಜಿ.ಪರಮೇಶ್ವರ್ ಅವರ ಶ್ರಮವಿದೆ ಎಂದರು.
ಪ್ರತಿಭಟನೆಯಲ್ಲಿ ನಗುತಾ ರಂಗನಾಥ್, ಅತೀಕ್ ಅಹಮದ್, ಪ್ರಭಾವತಿ ಸುಧೀಶ್ವರ್, ನಯಾಜ್ ಅಹಮದ್, ನಾಗೇಶ್, ಡಾ.ಚಂದ್ರಪ್ಪ, ದೊಡ್ಡಸಿದ್ದಯ್ಯ, ಪಿ.ಶಿವಪ್ರಸಾದ್, ಇರಕಸಂದ್ರ ಜಗನ್ನಾಥ್, ನರಸಿಂಹಮೂರ್ತಿ, ಕೊರಟಗೆರೆ ಕುಮಾರ್, ಎನ್.ಕೆ.ನಿಧಿ ಕುಮಾರ್, ಸಿದ್ದಲಿಂಗಯ್ಯ, ರಘು, ರಾಜೇಶ್, ನಿವೃತ್ತ ಅಧಿಕಾರಿ ಶಿವಣ್ಣ, ವಿಜಯಲಕ್ಷ್ಮಿ, ನಾಗಮ್ಮ, ವಸುಂಧರ, ಶ್ರೀಧರ್, ಓಂಕಾರ್ ಕೊಪ್ಪಕಲ್ಲು, ಮಂಜೇಶ್, ಸೈದಪ್ಪ ಡಾಂಗೆ ಮತ್ತಿತರರು ಭಾಗವಹಿಸಿದ್ದರು.
ಕಲ್ಪತರು ನಾಡಿಗೆ ಒಲಿಯಲಿದೆಯೇ ಸಿಎಂ ಗಾದಿ!?; ಕೊನೆಯ ಕ್ಷಣದಲ್ಲಿ ಅಚ್ಚರಿಯ ಬೆಳವಣಿಗೆ!
+ There are no comments
Add yours