ದೀಪಾಂಬುದಿ ಕೆರೆ ನೀರಿನಲ್ಲಿ ಅಪರಿಚಿತ ಶವ ಪತ್ತೆ
Tumkurnews
ತುಮಕೂರು; ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿ ಅಂಗರಹಳ್ಳಿ ಗ್ರಾಮ ಕಾಳಿಕಾಂಬ ದೇವಾಲಯದ ಮುಂಭಾಗ ಇರುವ ದೀಪಾಂಬುದಿ ಕೆರೆ ನೀರಿನಲ್ಲಿ ಮಾರ್ಚ್ 14ರಂದು ಸಂಜೆ 5-45 ಗಂಟೆಗೆ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವವೊಂದು ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತನ ವಾರಸುದಾರರ ಬಗ್ಗೆ ಮಾಹಿತಿ ತಿಳಿದು ಬಂದಿರುವುದಿಲ್ಲ.
ಮೃತ ವ್ಯಕ್ತಿಯು ಸಾಧಾರಣ ಮೈಕಟ್ಟು ಹೊಂದಿದ್ದು, ಮೈಮೇಲೆ ಹಳದಿ ಬಣ್ಣದ ಹೂವಿನ ವಿನ್ಯಾಸವುಳ್ಳ ನೀಲಿ ಬಣ್ಣದ ತುಂಬು ತೋಳಿನ ಅಂಗಿ, ಸಿಮೆಂಟ್ ಬಣ್ಣದ ನಿಕ್ಕರ್ ಇರುತ್ತದೆ. ಈತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಹುಲಿಯೂರುದುರ್ಗ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್’ಪೆಕ್ಟರ್ ತಿಳಿಸಿದ್ದಾರೆ.
+ There are no comments
Add yours