ಚಿಕ್ಕನಾಯಕನಹಳ್ಳಿ; ಅಂಗನವಾಡಿ ಕೇಂದ್ರದ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

 

ಚಿಕ್ಕನಾಯಕನಹಳ್ಳಿ; ಅಂಗನವಾಡಿ ಕೇಂದ್ರದ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Tumkurnews
ತುಮಕೂರು; ಚಿಕ್ಕನಾಯಕನಹಳ್ಳಿ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 7 ಅಂಗನವಾಡಿ ಕಾರ್ಯಕರ್ತೆ ಹಾಗೂ 36 ಸಹಾಯಕಿಯರ ಹುದ್ದೆಗಳನ್ನು ತಾತ್ಕಾಲಿಕವಾಗಿ ಗೌರವ ಧನದ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ಏಪ್ರಿಲ್ 6ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಸಾಮಥ್ರ್ಯ ಸೌಧ, ತಾಲ್ಲೂಕು ಪಂಚಾಯಿತಿ ಆವರಣ, ಚಿಕ್ಕನಾಯಕನಹಳ್ಳಿ ಇವರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 08133-268245ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಾರಸಂದ್ರಪಾಳ್ಯ, ಲಕ್ಕೇನಹಳ್ಳಿ, ಸಾದರಹಳ್ಳಿ ಎ, ದಸೂಡಿ ಬಿ, ಕಂಪನಹಳ್ಳಿ, ಮಲಗೊಂಡನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇದ್ದು, ಸದರಿ ಹುದ್ದೆಗಳು ಇತರೆ ವರ್ಗಕ್ಕೆ ಹಾಗೂ ರಾಮನಾಯ್ಕನ ತಾಂಡ್ಯ ಕೇಂದ್ರದ ಹುದ್ದೆಯು ಪ.ಜಾತಿಗೆ ಮೀಸಲಿಡಲಾಗಿದೆ.
ದಸೂಡಿ ಎ, ಹೊನ್ನಯ್ಯನಹಟ್ಟಿ, ಸಿಂಗಾಪುರ, ಬೊಮ್ಮೇನಹಳ್ಳಿ, ದೊಡ್ಡ ಎಣ್ಣೇಗೆರೆ ಗೇಟ್, ನಡುವನಹಳ್ಳಿ ಎ, ಮತಿಘಟ್ಟ, ಬೆಳಗೀಹಳ್ಳಿ, ಕುಪ್ಪೂರು, ಭಾವನಹಳ್ಳಿ, ಮದ್ದೇನಹಳ್ಳಿ ಎ, ಬರಕನಹಾಳ್, ಸಿದ್ದರಾಮನಗರ, ಗೋಡೆಕೆರೆ ಎ, ಗೊಲ್ಲರಹಳ್ಳಿ, ದೊಡ್ಡನಹಟ್ಟಿ, ಲಕ್ಮೇನಹಳ್ಳಿ, ಸಾಸಲುನವಗ್ರಾಮ, ಬಸವೇಶ್ವರನಗರ, ಯರೇಕಟ್ಟೆ, ರಾಮನಗರ ಮರಾಠಿಪಾಳ್ಯ, ಬಗ್ಗನಹಳ್ಳಿ ಗೊಲ್ಲರಹಟ್ಟಿ, ಬೈಲಪ್ಪನಮಠ, ದಬ್ಬಗುಂಟೆ ಕೋಲುದೇವರಹಟ್ಟಿ, ಮಸಾತಿಗುಡ್ಲು, ನಂದಿಹಳ್ಳಿ ಗೊಲ್ಲರಹಟ್ಟಿ, ಕಮಲ್ ಸಾಬರಪಾಳ್ಯ, ಮಲ್ಲಾಳ, ಬನಶಂಕರಿ, ಸರಸ್ವತಿಪುರ, ಶಿವಕುಮಾರಸ್ವಾಮಿ ಬಡಾವಣೆ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆಗಳು ಇತರೆ ವರ್ಗಕ್ಕೆ ಮೀಸಲಿಡಲಾಗಿದೆ. ಅದೇ ರೀತಿ ಬಾಚಿಹಳ್ಳಿ, ಬಲ್ಲೇನಹಳ್ಳಿ, ದೊಡ್ಡಬಿದರೆ ಲಂಬಾಣಿ ತಾಂಡ್ಯ, ಮುನಿಯಮ್ಮನಪಾಳ್ಯ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆಗಳು ಪರಿಶಿಷ್ಟ ಜಾತಿಗೆ ಹಾಗೂ ಕೆಂಗಲಾಪುರಪಾಳ್ಯ ಕೇಂದ್ರದ ಸಹಾಯಕಿ ಹುದ್ದೆಯು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ.

About The Author

You May Also Like

More From Author

+ There are no comments

Add yours