ಅಪರಿಚಿತ ವ್ಯಕ್ತಿ ಶವ ಪತ್ತೆ
Tumkurnews
ತುಮಕೂರು; ಬಹುಶಃ ವಿಪರ್ಯಾಸವೆಂದರೆ ಇದೇ ಇರಬೇಕು. ಈ ವ್ಯಕ್ತಿ ಮೈ ತುಂಬಾ ಸಂಬಂಧಿಕರು, ಕುಟುಂಬ ಸದಸ್ಯರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾನೆ. ಆದರೆ ಈತನ ಸಾವಿನ ಸಮಯದಲ್ಲಿ ಯಾರೊಬ್ಬರೂ ಜೊತೆಗಿರಲಿಲ್ಲ. ಅನಾಥ ಶವವಾಗಿ ಪೊಲೀಸರಿಗೆ ಪತ್ತೆಯಾಗಿದ್ದಾನೆ. ಅಪರಿಚಿತ ಶವವಾಗಿ ಪತ್ತೆಯಾದ ಈತನ ವಾರಸುದಾರರ ಪತ್ತೆಗೆ ಇದೀಗ ಪೊಲೀಸರು ಮುಂದಾಗಿದ್ದು, ಲೈಫು ಇಷ್ಟೇ ಎನ್ನುವಂತಾಗಿದೆ.
ಪೊಲೀಸ್ ಪ್ರಕಟಣೆ; ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿ ಬಟವಾಡಿ ಸಮೀಪ ಚೌಡೇಶ್ವರಿ ನಗರದ ರಾಷ್ಟ್ರೀಯ ಹೆದ್ದಾರಿ 48ರ ಸರ್ವೀಸ್ ರಸ್ತೆ ಪಾದಚಾರಿ ಮಾರ್ಗದಲ್ಲಿ ಫೆಬ್ರವರಿ 10ರಂದು 40 ವರ್ಷದ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ಈತನ ವಾರಸುದಾರರ ಬಗ್ಗೆ ಮಾಹಿತಿ ತಿಳಿದು ಬಂದಿರುವುದಿಲ್ಲ.
ಮೃತ ವ್ಯಕ್ತಿಯ ಮೈಮೇಲೆ ನೀಲಿ ಬಣ್ಣದ ತುಂಬು ತೋಳಿನ ಅಂಗಿ, ನೀಲಿ ಬಣ್ಣದ ಪ್ಯಾಂಟ್ ಇರುತ್ತದೆ. ಕೈಗಳ ಮೇಲೆ ಸುರೇಶ, ಶಂಕರಪ್ಪ, ಅಮ್ಮ, ರಾಣಿ, ಭವಾನಿ, ಚಿಟ್ಟೆ, ಲಕ್ಕಿ, ಪ್ರಕಾಶ್, ಲವ್ ಎಂದು ಬರೆದಿರುತ್ತದೆ. ಈತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ವಾ.ಸಂ. 0816-2281124, 2281120, 2272451 ಅಥವಾ ಮೊ.ಸಂ.9480802952-33-00ಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಬ್ ಇನ್ಸ್’ಪೆಕ್ಟರ್ ತಿಳಿಸಿದ್ದಾರೆ.
+ There are no comments
Add yours