ಪಾವಗಡ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

 

ಪಾವಗಡ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Tumkurnews
ತುಮಕೂರು; ಪಾವಗಡ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 5 ಅಂಗನವಾಡಿ ಕಾರ್ಯಕರ್ತೆ ಹಾಗೂ 15 ಸಹಾಯಕಿಯರ ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ಏಪ್ರಿಲ್ 6ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಶ್ರೀನಿವಾಸ ನಗರ, ಪಾವಗಡ ಇವರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ವಾ.ಸಂ. 08136-245733ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಐವಾರ್ಲಹಳ್ಳಿ, ದವಡಬೆಟ್ಟ-1ನೇ ಕೇಂದ್ರ, ವಿನಾಯಕನಗರ(4ನೇ ವಾರ್ಡ್), ರೆಡ್ಡಿ ಕಾಲೋನಿ(2ನೇ ವಾರ್ಡ್), ಆರ್.ಅಚ್ಚಮ್ಮನಹಳ್ಳಿ-(2ನೇ ಕೇಂದ್ರ) ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇದ್ದು, ಐವಾರ್ಲಹಳ್ಳಿ ಕೇಂದ್ರದ ಹುದ್ದೆಯು ಪ.ಜಾತಿಗೆ ಹಾಗೂ ಉಳಿದ ಹುದ್ದೆಗಳು ಇತರೆ ವರ್ಗಕ್ಕೆ ಮೀಸಲಿಡಲಾಗಿದೆ.
ಪಳವಳ್ಳಿ ತಾಂಡ, ಹೊಸಹಳ್ಳಿ ತಾಂಡ, ಎಸ್.ಎನ್.ಹಳ್ಳಿ ಜಿ.ಹಟ್ಟಿ ಕೇಂದ್ರದ ಸಹಾಯಕಿಯರ ಹುದ್ದೆಗಳು ಪ.ಜಾತಿಗೆ; ಕ್ಯಾತಗಾನಚೆರ್ಲು-1 ಕೇಂದ್ರದ ಹುದ್ದೆಯು ಪ.ಪಂಗಡಕ್ಕೆ; ಮಸೀದಿ ಹಿಂಭಾಗ ಕೇಂದ್ರದ ಹುದ್ದೆಯು ಅಲ್ಪಸಂಖ್ಯಾತ(ಎಂ.ಎನ್.) ವರ್ಗಕ್ಕೆ; ದೊಡ್ಡಹಳ್ಳಿ, ಭೀಮನಕುಂಟೆ, ಮಂಗಳವಾಡ-1, ಮದ್ದಿಬಂಡೆ, ಗಂಗಸಾಗರ, ಆರ್.ಅಚ್ಚಮ್ಮನಹಳ್ಳಿ-2, ಜೂಲಪ್ಪನಹಟ್ಟಿ, ರೆಡ್ಡಿಕಾಲೋನಿ(2ನೇ ವಾರ್ಡ್), ವಿನಾಯಕ ನಗರ(4ನೇ ವಾರ್ಡ್) ಹಾಗೂ ಬನಶಂಕರಿ (4ನೇ ವಾರ್ಡ್) ಅಂಗನವಾಡಿ ಕೇಂದ್ರದ ಹುದ್ದೆಗಳು ಇತರೆ ವರ್ಗಕ್ಕೆ ಮೀಸಲಿಡಲಾಗಿದೆ.

About The Author

You May Also Like

More From Author

+ There are no comments

Add yours