ತುಮಕೂರು; 27 ವರ್ಷದ ಯುವಕ ನಾಪತ್ತೆ

1 min read

ವ್ಯಕ್ತಿ ಕಾಣೆ
ತುಮಕೂರು; ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿ ರಾಜೀವ್ ಗಾಂಧಿ ನಗರ ನಿವಾಸಿ 27 ವರ್ಷದ ಆಸಿಫ್ ಉಲ್ಲಾ ಎಂಬ ವ್ಯಕ್ತಿಯು ಜನವರಿ 29ರ ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಮನೆಯಿಂದ ಹೊರಹೋದವನು ಮರಳಿ ಬಂದಿರುವುದಿಲ್ಲ ಎಂದು ತಾಯಿ ಹಸೀನಾಖಾನಂ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದ ವ್ಯಕ್ತಿಯು 5.5ಅಡಿ ಎತ್ತರ, ಕೋಲುಮುಖ, ತೆಳ್ಳನೆ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಉರ್ದು ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಕಪ್ಪು ಮತ್ತು ಬಿಳಿ-ಹಳದಿ ವಿನ್ಯಾಸವುಳ್ಳ ಟೀ ಷರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದನು.
ಈ ವ್ಯಕ್ತಿಯ ಸುಳಿವು ಸಿಕ್ಕಿದವರು ದೂ.ವಾ.ಸಂ. 0816-2278202, 2278424, 2272340, 2278000 ಅಥವಾ ಮೊ.ಸಂ.9480802981-32-20ಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಬ್ ಇನ್ಸ್’ಪೆಕ್ಟರ್ ತಿಳಿಸಿದ್ದಾರೆ.

ಚುನಾವಣಾ ಪೂರ್ವ ಸಿದ್ದತೆ; ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಪರಿಶೀಲನೆ

About The Author

You May Also Like

More From Author

+ There are no comments

Add yours