ಅಂತಾರಾಜ್ಯ ಅಕ್ರಮ ಗೋ ಸಾಗಾಟ ಪತ್ತೆ ಹಚ್ಚಿದ VHP, ಬಜರಂಗದಳ! 11 ಲಾರಿ, 16 ಮಂದಿ ಬಂಧನ

1 min read

 

ನಕಲಿ ದಾಖಲೆ ಬಳಸಿ ಅಕ್ರಮ ಗೋ ಸಾಗಾಟ; 11 ಲಾರಿ ಸೇರಿ 16 ಮಂದಿ ಬಂಧನ; VHP, ಬಜರಂಗದಳ ಕಾರ್ಯಚರಣೆ

Tumkur news
ತುಮಕೂರು; ನಕಲಿ ದಾಖಲೆಗಳೊಂದಿಗೆ 11 ಲಾರಿಗಳಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ 11 ಮಂದಿ ಸೇರಿದಂತೆ 16 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮಹಾರಾಷ್ಟ್ರ ನೋಂದಣಿಯ 11 ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮಾರ್ಚ್ 12ರಂದು ನಿಷೇದಾಜ್ಞೆ; ಜಿಲ್ಲಾಧಿಕಾರಿ ಆದೇಶ
ಕಳೆದ ಮೂರು ದಿನಗಳ ಹಿಂದೆ ಕೋಲಾರ ಜಿಲ್ಲೆಯ ಚಿಂತಾಮಣಿಯಿಂದ ಮಹಾರಾಷ್ಟ್ರ ರಾಜ್ಯಕ್ಕೆ 11 ಲಾರಿಗಳಲ್ಲಿ 109 ದನಗಳನ್ನು ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ತುಮಕೂರಿನ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ತುಮಕೂರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಚಾಲಕರ ಸಹಿತ 11 ಲಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ತಂದೆ; ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್
ನಕಲಿ ದಾಖಲೆ; ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಲು ಬಂಧಿತ ಆರೋಪಿಗಳು ನಕಲಿ ದಾಖಲೆಗಳನ್ನು ಬಳಸಿರುವುದು ಪೊಲೀಸರ ಪರಿಶೀಲನೆ ವೇಳೆ ಪತ್ತೆಯಾಗಿದೆ. ಚಿಂತಾಮಣಿಯ ಸದಾನಂದ ಗೌಡ(ದಯಾನಂದ) ಎಂಬಾತ ಪ್ರೊಟೆಕ್ಷನ್ ಆಫ್ ವೈಲ್ಡ್ ಅನಿಮಲ್ಸ್ ಅಂಡ್ ಬರ್ಡ್ಸ್ ಆಫ್ ಕರ್ನಾಟಕ ಎಂಬ ಲೆಟರ್ ಹೆಡ್’ನಲ್ಲಿ ಗೋ ಸಾಗಾಟಕ್ಕೆ ಪೂರಕವಾಗುವಂತೆ ನಕಲಿ ದಾಖಲೆಗಳನ್ನು ನೀಡಿದ್ದಾನೆ. ಪೊಲೀಸರು ಬಂಧಿಸುವಾಗ ಆ ದಾಖಲೆಗಳನ್ನು ತೋರಿಸಿ ತಾವು ಗೋವುಗಳನ್ನು ಖರೀದಿ ಮಾಡಿ ಕೊಂಡೊಯ್ಯುತ್ತಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಸಾಲದಕ್ಕೆ ಗೋವುಗಳು ಮೇವು, ನೀರಿಲ್ಲದೇ ಪರದಾಡುತ್ತಿವೆ ಎಂದು ಗೋ ರಕ್ಷಕರ ವಿರುದ್ಧ ಹರಿಹಾಯ್ದಿದ್ದರು. ಆದರೆ ಪೊಲೀಸರ ವಿಚಾರಣೆ ಬಳಿಕ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದದ್ದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವಿ.ಎಚ್.ಪಿ ಮುಖಂಡ ಜಿ.ಕೆ ಶ್ರೀನಿವಾಸ್ ನೀಡಿದ ದೂರಿನ ಆಧಾರದ ಮೇಲೆ 11 ಮಂದಿ ಆರೋಪಿಗಳ ವಿರುದ್ಧ ಮಾರ್ಚ್ 7ರಂದು ಎಫ್.ಐ.ಆರ್ ದಾಖಲಿಸಲಾಗಿದೆ.

ತುಮಕೂರು; ಗಾಂಜಾ, ಡ್ರಗ್ಸ್, ಮಾದಕ ಜಾಲದಲ್ಲಿ ವಿದ್ಯಾರ್ಥಿಗಳು! ಡಿಸಿ, ಎಸ್.ಪಿ ಕಳವಳ, ಮಹತ್ವದ ಸಭೆ
ಕಿಡಿಗೇಡಿಗಳಿಂದ ದಾಳಿ; ಪೊಲೀಸರು ವಶಪಡಿಸಿಕೊಂಡ ಗೋವುಗಳನ್ನು ಶಿರಾ ಗೋ ಶಾಲೆಗೆ ಬಿಡಲಾಗಿದೆ. ಗೋ ಶಾಲೆಗೆ ತೆರಳುವ ವೇಳೆ ವಿ ಎಚ್ ಪಿ ಹಾಗೂ ಬಜರಂಗದಳದ ಕಾರ್ಯಕರ್ತರ ಮೇಲೆ ಕೋಲಾರ, ಚಿಂತಾಮಣಿಯಿಂದ ಬಂದಿದ್ದ ಕಿಡಿಗೇಡಿಗಳು ದಾಳಿ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ‌ಸೇರಿದಂತೆ ಒಟ್ಟು 16 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಿಬಿಐ ತನಿಖೆಗೆ ಆಗ್ರಹ; ಅಕ್ರಮ ಗೋ ಸಾಗಣೆಗೆ ನಕಲಿ ದಾಖಲೆಗಳನ್ನು ನೀಡುತ್ತಿರುವುದು ಹಾಗೂ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಗೋ ಸಾಗಾಟ ಮಾಡುತ್ತಿರುವುದು ಗೋ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಅಂತಾರಾಜ್ಯ ಅಕ್ರಮ ಗೋ ಸಾಗಣೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸದರಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ವಿ ಎಚ್ ಪಿ ಹಾಗೂ ಬಜರಂಗದಳ ಒತ್ತಾಯಿಸಿದೆ.

ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳಿಗೂ ವಿದ್ಯಾನಿಧಿ ವಿಸ್ತರಣೆ!; ಸರ್ಕಾರದ ಮಹತ್ವದ ಆದೇಶ

About The Author

You May Also Like

More From Author

+ There are no comments

Add yours