ಗುಬ್ಬಿ ಅಂಗನವಾಡಿ ಕೇಂದ್ರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

ಗುಬ್ಬಿ ಅಂಗನವಾಡಿ ಕೇಂದ್ರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Tumkurnews
ಗುಬ್ಬಿ; ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 2 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 24 ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ, ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ಏಪ್ರಿಲ್ 5ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಗುಬ್ಬಿ ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 08131-223731ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾರ್ಚ್ 12ರಂದು ನಿಷೇದಾಜ್ಞೆ; ಜಿಲ್ಲಾಧಿಕಾರಿ ಆದೇಶ
ಕರಿಯಣ್ಣನಪಾಳ್ಯ ಗೊಲ್ಲರಹಟ್ಟಿ ಹಾಗೂ ಪಟ್ರಾವತನಹಳ್ಳಿ ಗೊಲ್ಲರಹಟ್ಟಿ ಮಿನಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇದ್ದು, ಹುದ್ದೆಗಳು ಇತರೆ ವರ್ಗಕ್ಕೆ ಮೀಸಲಿಡಲಾಗಿದೆ.
ಕೋಡಿಹಟ್ಟಿ ಹಾಗೂ ಹಾಗಲವಾಡಿ-ಬಿ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆಗಳು ಪ.ಜಾತಿಗೆ ಮೀಸಲಿಡಲಾಗಿದ್ದು, ಗದ್ದೆಹಳ್ಳಿ, ವಡವನಘಟ್ಟ, ದೊಡ್ಡನೆಟಕುಂಟೆ, ಅಪ್ಪಣ್ಣನಹಳ್ಳಿ, ಸುಭಾಷನಗರ-ಎ, ಬಿಳಿನಂದಿ, ತ್ಯಾಗಟೂರು-ಬಿ, ಬೆಣ್ಣೂರು, ಚಿಕ್ಕಕುನ್ನಾಲ-ಎ, ಅಳಿಲುಘಟ್ಟ-ಎ, ಅಳಿಲುಘಟ್ಟ-ಬಿ, ಪುರ, ನಿಂಬೆಕಟ್ಟೆ, ಪ್ರಭುವನಹಳ್ಳಿ, ಕಬ್ಬಿಣಸೇತುವೆ ಪಾಳ್ಯ, ಮಹಾಲಕ್ಷ್ಮಿನಗರ, ವಿನಾಯಕನಗರ, ಹೊಸಪಾಳ್ಯ, ಹೊದಲೂರು, ಲಕ್ಕೇನಹಳ್ಳಿ ಗೊಲ್ಲರಹಟ್ಟಿ, ಬಂಡಿಹಳ್ಳಿ, ಮರಾಠಿಪಾಳ್ಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಸಹಾಯಕಿ ಹುದ್ದೆಗಳು ಇತರೆ ವರ್ಗಕ್ಕೆ ಮೀಸಲಿಡಲಾಗಿದೆ.

ತುಮಕೂರು; ಗಾಂಜಾ, ಡ್ರಗ್ಸ್, ಮಾದಕ ಜಾಲದಲ್ಲಿ ವಿದ್ಯಾರ್ಥಿಗಳು! ಡಿಸಿ, ಎಸ್.ಪಿ ಕಳವಳ, ಮಹತ್ವದ ಸಭೆ

About The Author

You May Also Like

More From Author

+ There are no comments

Add yours