ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ.
Tumkurnews
ತುಮಕೂರು; ತಂದೆ, ತಾಯಿ ಹಾಗೂ ಅಜ್ಜಿಯ ಸಾವಿನಿಂದಾಗಿ ಅನಾಥರಾಗಿದ್ದ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರಕನಹಾಲ್ ತಾಂಡ್ಯ ಬಳಿ ಘಟನೆ ಸಂಭವಿಸಿದ್ದು, 9 ದಿನಗಳ ಬಳಿಕ ಬೆಳಕಿಗೆ ಬಂದಿದೆ.
ರಂಜಿತಾ(24), ಬಿಂದು(21) ಹಾಗೂ ಚಂದನ(18) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು. ಕೆಲವು ವರ್ಷಗಳ ಹಿಂದೆ ಈ ಮಕ್ಕಳ ತಂದೆ, ತಾಯಿ ಮೃತರಾಗಿದ್ದರು. ಮಕ್ಕಳನ್ನು ಅಜ್ಜಿ ಸಾಕುತ್ತಿದ್ದರು. ಆದರೆ ಇತ್ತೀಚೆಗೆ ಅಜ್ಜಿಯೂ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೂವರು ಮಕ್ಕಳು ಅನಾಥರಾಗಿದ್ದರು.
ಅಜ್ಜಿಯ ಮರಣದ ಬಳಿಕ ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡಿತ್ತು, ಅದರ ನಡುವೆಯೂ ಇಬ್ಬರು ಸಹೋದರಿಯರು ಕಿಬ್ಬನಹಳ್ಳಿ ಬಳಿಯ ಗಾರ್ಮೆಂಟ್ಸ್’ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ 9 ದಿನಗಳ ಹಿಂದೆ ಮೂರು ಜನ ಸಹೋದರಿಯರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶವ ಕೊಳೆಯಲು ಆರಂಭಿಸಿದ ಬಳಿಕ ಸ್ಥಳೀಯರಿಗೆ ವಿಷಯ ಗೊತ್ತಾಗಿದ್ದು, ಪ್ರಕರಣ ಬಯಲಿಗೆ ಬಂದಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
+ There are no comments
Add yours