ಡಿ.22ರಿಂದ ವಿದ್ಯುತ್ ವ್ಯತ್ಯಯ
Tumkurnews
ತುಮಕೂರು; ಬೆವಿಕಂ ನಿಟ್ಟೂರು ವ್ಯಾಪ್ತಿಯಲ್ಲಿ ಲಿಂಕ್ ಲೈನ್ ಕಾಮಗಾರಿ ಕೈಗೊಂಡಿರುವುದರಿಂದ ನಿಟ್ಟೂರು ಹೋಬಳಿ ವ್ಯಾಪ್ತಿಗೆ ಒಳಪಡುವ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಸೋಪನಹಳ್ಳಿ, ಯಲ್ಲಾಪುರ, ಮಾರಶೆಟ್ಟಿಹಳ್ಳಿ, ಹೇಮಾವತಿ, ಕಳ್ಳೇನಹಳ್ಳಿ, ಎಸ್.ಸಂಕಾಪುರ, ಸಾಗರನಹಳ್ಳಿ, ಡಿ.ರಾಂಪುರ, ಬೊಮ್ಮರಸನಹಳ್ಳಿ, ಕುಂದರನಹಳ್ಳಿ, ಹಂಡನಹಳ್ಳಿ, ಎಂ.ಎನ್. ಕೋಟೆ, ಅಂಕಾಪುರ ಒಳಪಡುವ ಗ್ರಾಮಗಳಿಗೆ 2022ರ ಡಿ.22 ರಿಂದ 2023ರ ಜ.10ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
+ There are no comments
Add yours