ತುಮಕೂರಿನಲ್ಲಿ ಕುವೆಂಪು ನಾಟಕೋತ್ಸವ; ಡಿ.26ಕ್ಕೆ ಚಾಲನೆ

1 min read

Tumkur News
ತುಮಕೂರು; ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಕಹಳೆ ಬೆಂಗಳೂರು ವತಿಯಿಂದ ಡಿಸೆಂಬರ್ 26 ರಿಂದ 29ರವರೆಗೆ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪ್ರತಿ ದಿನ ಸಂಜೆ 6 ಗಂಟೆಯಿಂದ 21ನೇ ಕುವೆಂಪು ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಡಿ.26ರಂದು ಸಂಜೆ 6 ಗಂಟೆಗೆ ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ. ವಿದ್ಯಾಕುಮಾರಿ ಅವರು ಉದ್ಘಾಟಿಸುವರು. ಭಾರತ ಸರ್ಕಾರದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣದಾಸ್ ಅಧ್ಯಕ್ಷತೆ ವಹಿಸುವರು.
ಡಿ.26ರಂದು ಸಂಜೆ 6.15ಕ್ಕೆ ಬೊಮ್ಮನಹಳ್ಳಿಯ ಕಿಂದರಿಜೋಗಿ, 7.30ಕ್ಕೆ ಮೋಡಣ್ಣನ ತಮ್ಮ, ಡಿ.27ರಂದು ಸಂಜೆ 6.20ಕ್ಕೆ ಬಾಲಕ ಕುವೆಂಪು, 7.30ಕ್ಕೆ ಸ್ಮಶಾನ ಕುರುಕ್ಷೇತ್ರ; ಡಿ.28ರಂದು ಸಂ.6.15ಕ್ಕೆ ಯಮನ ಸೋಲು, 7.15ಕ್ಕೆ ನನ್ನ ಗೋಪಾಲ, ಡಿ.29ರಂದು ಸಂಜೆ 6 ಗಂಟೆಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರ ಘನ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಹಾಗೂ 6.20ಕ್ಕೆ ರಾಷ್ಟ್ರಕವಿಗೆ ನೃತ್ಯದೀವಿಗೆ ಮತ್ತು 7.20ಕ್ಕೆ ಶೂದ್ರತಪಸ್ವಿ ಎಂಬ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ.

About The Author

You May Also Like

More From Author

+ There are no comments

Add yours