ಭೀಮಸಂದ್ರಪಾಳ್ಯ ಸರ್ಕಾರಿ ಶಾಲೆ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ; ಶಾಸಕ ಜಿ.ಬಿ‌ ಜ್ಯೋತಿಗಣೇಶ್

1 min read

Tumkurnews
ತುಮಕೂರು; ನಗರದ 6ನೇ ವಾರ್ಡ್ ಭೀಮಸಂದ್ರ ಪಾಳ್ಯದ ಸರ್ಕಾರಿ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಬಿ‌ ಜ್ಯೋತಿಗಣೇಶ್ ಗುದ್ದಲಿ ಪೂಜೆ ನೆರವೇರಿಸಿದರು.

ಸ್ಟಿಂಗ್ ಆಪರೇಷನ್; 108 ಕಳ್ಳಾಟ ಬಯಲು ಮಾಡಿದ ತಹಸೀಲ್ದಾರ್!
ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಜ್ಯೋತಿಗಣೇಶ್, ತುಮಕೂರು ನಗರಕ್ಕೆ ಶಿಕ್ಷಣ ಸಚಿವ ಸಚಿವ ಬಿ.ಸಿ ನಾಗೇಶ್ ಅವರು ವಿವೇಕ ಯೋಜನೆಯಡಿ 5 ಕೊಠಡಿಗಳನ್ನು ಶಿಥಿಲಾವಸ್ಥೆಯಲ್ಲಿರುವ ಈ ಶಾಲೆಗೆ ನೀಡಲಾಗಿದೆ. ಈಗಾಗಲೇ ಸರ್ಕಾರದ ಅನುದಾನವನ್ನು ಬಳಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಸುಮಾರು 150ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಈ ಶಾಲೆಯು ಶಿಥಿಲಾವಸ್ಥೆಯಲ್ಲಿದ್ದು, ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕಾಗಿ ನೂತನ ಶಾಲಾ ಕಟ್ಟಡಗಳ ಅವಶ್ಯಕವಿತ್ತು. ಹೀಗಾಗಿ ಇಲ್ಲಿಗೆ 5 ಹೊಸ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸುಮಾರು 60 ಲಕ್ಷಗಳ ಈ ಕಾಮಗಾರಿಯನ್ನು ಸಂಬಂಧಪಟ್ಟ ಗುತ್ತಿಗೆದಾರರು ತುರ್ತಾಗಿ ಕೈಗೊಳ್ಳಬೇಕೆಂದು, ಕಟ್ಟವನ್ನು ತೆರವು ಮಾಡಿದ ಸಂದರ್ಭದಲ್ಲಿ ಮಕ್ಕಳ ವ್ಯಾಸಂಗಕ್ಕೆ ಬದಲಾಗಿ ಪಕ್ಕದಲ್ಲಿರುವ ಸಮುದಾಯ ಭವನದಲ್ಲಿ ನಡೆಸಲು ಈ ಭಾಗದ ಪಾಲಿಕೆ ಸದಸ್ಯರು ಅನುಕೂಲ ಕಲ್ಪಿಸಿದ್ದಾರೆ ಎಂದರು.

ತುಮಕೂರು ರೈತರಿಗೆ 988 ಕೋಟಿ ರೂ. ಬಿಡುಗಡೆ, ಕಾಫಿ ಬೆಳೆಗಾರರಿಗೆ 1 ಲಕ್ಷ ಎಕರೆ ಜಮೀನು ಗುತ್ತಿಗೆಗೆ; ಆರ್.ಅಶೋಕ್
ಮುಂಬರುವ ದಿನಗಳಲ್ಲಿ ಈ ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಹಾಗೂ ಈ ಶಾಲೆಯಲ್ಲಿ ಶೈಕ್ಷಣಿಕವಾಗಿ ಉನ್ನತ ಮಟ್ಟದಲ್ಲಿ ವಿದ್ಯಾರ್ಥಿಗಳು ಬೆಳೆಯಲು ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಅಭಿನಂದನೆಗಳು ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ.ಬಿ.ಜಿ, ಮುಖಂಡರಾದ ಮಂಜಣ್ಣ, ಸಿದ್ಧಲಿಂಗಯ್ಯ, ಕುಮಾರ್ ದೊಡ್ಡಸಿದ್ದಯ್ಯ, ಸಿದ್ಧಲಿಂಗಸ್ವಾಮಿ, ಮನೋಹರಗೌಡ, ಪ್ರಸನ್ನಕುಮಾರ್, ಚೇತನ್.ಬಿ.ಎಸ್, ಧನರಾಜ್ ಬಿ.ಎನ್, ಪ್ರಕಾಶ್, ಮಹೇಶ್, ಚಂದನ್, ಅರ್ಚಕ ಜಯರಾಮ್, ಶಂಕರ್, ಶಾಲಾ ಮುಖ್ಯಶಿಕ್ಷಕರು ಹಾಗೂ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours