ತಿಪಟೂರು; ಕೆಪಿಟಿಸಿಎಲ್’ನಿಂದ ನೂತನ ವಿದ್ಯುತ್ ಮಾರ್ಗ; ಆಕ್ಷೇಪಣೆ ಸಲ್ಲಿಸಲು ಅವಕಾಶ

1 min read

Tumkurnews
ತುಮಕೂರು; ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ಜಿಲ್ಲೆಯ ತಿಪಟೂರು ತಾಲ್ಲೂಕು ಕರದಾಳು ಗ್ರಾಮದ ಬಳಿ ಹಾಲಿ ಇರುವ 110 ಕೆ.ವಿ. ಕೆಬಿಕ್ರಾಸ್-ಮಾಯಸಂದ್ರ ಏಕಮುಖ ಪ್ರಸರಣ ಮಾರ್ಗದಿಂದ ಉದ್ದೇಶಿತ ಕರದಾಳು 110/11 ಕೆವಿ ಉಪಸ್ಥಾವರದವರೆಗೆ 110 ಕೆವಿ ದ್ವಿಮುಖ ಗೋಪುರಗಳ ಮೇಲೆ 1417ಲಕ್ಷ ರೂ. ವೆಚ್ಚದಲ್ಲಿ 8.60 ಉದ್ದದ ಲಿಲೋ ಮಾರ್ಗವನ್ನು ನಿರ್ಮಿಸಲು ಉದ್ದೇಶಿಸಿದೆ.
ಈ ಮಾರ್ಗ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದವರು 30 ದಿನಗಳೊಳಗಾಗಿ ಸಲ್ಲಿಸಬಹುದಾಗಿದೆ. ಕರದಾಳು ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳ ವೋಲ್ಟೇಜ್ ಸ್ಥಿತಿ ಉತ್ತಮಪಡಿಸಲು ಹಾಗೂ ಭವಿಷ್ಯದಲ್ಲಿ ವಿದ್ಯುತ್ ಹೊರೆ ಸರಿದೂಗಿಸುವ ಸಲುವಾಗಿ ಈ ಲಿಲೋ ಮಾರ್ಗವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಲಿಲೋ ಮಾರ್ಗವು ಜಿಲ್ಲೆಯ ತುರುವೇಕೆರೆ ತಾಲ್ಲೂಕು ಕಸಬಾ ಹೋಬಳಿ ಕೋಲಘಟ್ಟದ ಕಾವಲ್-ಕೋಲಘಟ್ಟ-ಶೇಗೆಹಳ್ಳಿ ಹಾಗೂ ತಿಪಟೂರು ತಾಲ್ಲೂಕು ಕಿಬ್ಬನಹಳ್ಳಿ ಹೋಬಳಿ ಕರದಾಳು-ಕುರುಬರ ಮಲ್ಲೇನಹಳ್ಳಿ-ಹಾರೋಘಟ್ಟ ಗ್ರಾಮದ ಮೂಲಕ ಹಾದು ಹೋಗಲಿದೆ ಎಂದು ಕೆಪಿಟಿಸಿಎಲ್‍ನ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ತಿಳಿಸಿದ್ದಾರೆ.

ಪ.ಜಾತಿ ಹಾಗೂ ಪಂಗಡದ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತ ವಿದ್ಯುತ್; ಮಹಂತೇಶ್ ಬಿಳಗಿ

About The Author

You May Also Like

More From Author

+ There are no comments

Add yours