Tumkurnews
ತುಮಕೂರು; ಮಂಗಳೂರಿನಲ್ಲಿ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲಿ ಪತ್ತೆಯಾಗಿರುವ ಆಧಾರ್ ಕಾರ್ಡ್’ನ ಮಾಲಿಕ ತುಮಕೂರಿನಲ್ಲಿ ಪತ್ತೆಯಾಗಿದ್ದಾನೆ.
ಮೂಲತಃ ಹುಬ್ಬಳ್ಳಿಯ ಕೇಶವಾಪುರದ ನಿವಾಸಿಯಾಗಿರುವ ಪ್ರೇಮರಾಜ್ ಹುಟಗಿ, ಬಾಂಬ್ ಸ್ಪೋಟ ನಡೆದ ಸ್ಥಳದಲ್ಲಿ ಸಿಕ್ಕಿರುವ ಆಧಾರ್ ಕಾರ್ಡ್’ನ ಮೂಲ ವ್ಯಕ್ತಿಯಾಗಿದ್ದಾನೆ. ಸದರಿ ಪ್ರೇಮರಾಜ್ ಹುಟಗಿ ಕಳೆದ ಮೂರು ವರ್ಷಗಳಿಂದ ತುಮಕೂರಿನಲ್ಲಿ ರೈಲ್ವೆ ಇಲಾಖೆಯಲ್ಲಿ ಟ್ರ್ಯಾಕ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ.
ಆಧಾರ್ ಕಳೆದುಕೊಂಡಿದ್ದ; ಪ್ರೇಮರಾಜ್ ಹುಟಗಿ ಧಾರವಾಡದಿಂದ ಬೆಳಗಾವಿಗೆ ಪ್ರಯಾಣಿಸುವಾಗ ಬಸ್ಸಿನಲ್ಲಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದ ಎನ್ನಲಾಗಿದ್ದು, ಈ ಬಗ್ಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಗೆ ಆತ ಮಾಹಿತಿ ನೀಡಿದ್ದಾನೆ. ತಾನು ಕಳೆದುಕೊಂಡಿದ್ದ ಆಧಾರ್ ಕಾರ್ಡನ್ನು ಸ್ಪೋಟ ಘಟನೆಯಲ್ಲಿ ಬಳಸಿಕೊಳ್ಳಲಾಗಿದೆ ಎಂದು ಪ್ರೇಮರಾಜ್ ಹುಟಗಿ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ಸ್ಪೋಟ ನಡೆದ ಬೆನ್ನಲ್ಲೇ ಶನಿವಾರ ರಾತ್ರಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರು ಪ್ರೇಮರಾಜ್ ಹುಟಗಿಗೆ ದೂರವಾಣಿ ಕರೆ ಮಾಡಿ ಆತನ ಆಧಾರ್ ಕಾರ್ಡ್ ಪತ್ತೆಯಾಗಿರುವ ಬಗ್ಗೆ ತಿಳಿಸಿ ಮಾಹಿತಿ ಪಡೆದಿದ್ದಾರೆ. ಬಳಿಕ ಕೂಡಲೇ ತುಮಕೂರು ಎಸ್.ಪಿ ಅವರನ್ನು ಸಂಪರ್ಕಿಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ ತುಮಕೂರು ಎಸ್.ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಅವರನ್ನು ಸಂಪರ್ಕಿಸಿದ ಪ್ರೇಮರಾಜ್ ಹುಟಗಿ. ನನ್ನ ಆಧಾರ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ, ನನಗೂ ಇದಕ್ಕು ಯಾವುದೇ ಸಂಬಂಧ ಇಲ್ಲ. ನಿನ್ನೆ ನಮ್ಮ ಮನೆಗೆ ಪೊಲೀಸರು ಬಂದು ಪರಿಶೀಲನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
+ There are no comments
Add yours