ಯಶಸ್ವಿಯಾಗಿ ನಡೆದ ಎರಡು ದಿನಗಳ ಸಮಗ್ರ ಪೀಡೆ ನಿರ್ವಹಣೆ ತರಬೇತಿ

1 min read

 

ಯಶಸ್ವಿಯಾಗಿ ನಡೆದ ಎರಡು ದಿನಗಳ ಸಮಗ್ರ ಪೀಡೆ ನಿರ್ವಹಣೆ ತರಬೇತಿ

Tumkurnews
ತುಮಕೂರು; ಕೃಷಿ ಸಂಶೋಧನಾ ಕೇಂದ್ರ ಕುಣಿಗಲ್ ಹಾಗೂ ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣೆ ಕೇಂದ್ರ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕುಣಿಗಲ್’ನಲ್ಲಿ ಇತ್ತೀಚೆಗೆ ಎರಡು ದಿನಗಳ ಸಮಗ್ರ ಪೀಡೆ ನಿರ್ವಹಣೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರವನ್ನು ಕೃಷಿ ವಿಜ್ಞಾನ ಕೇಂದ್ರ, ಕೊನೆಹಳ್ಳಿಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ವಿ ಗೋವಿಂದಗೌಡ ಅವರು ಉದ್ಘಾಟಿಸಿ ಮಾತನಾಡಿದರು. ಉದ್ಘಾಟನಾ ಭಾಷಣದಲ್ಲಿ ರೈತರಿಗೆ ವಾತಾವರಣದಲ್ಲಿನ ವೈಪರಿತ್ಯಗಳಿಂದ ಉಂಟಾಗುವ ರೋಗಗಳು ಹಾಗೂ ಅವುಗಳ ನಿವಾರಣಾ ಕ್ರಮಗಳು ಮತ್ತು ಕಳೆನಿಯಂತ್ರಣ ಕ್ರಮಗಳ ಬಗ್ಗೆ ಶೀಬಿರಾರ್ಥಿಗಳು ಸಂಪೂರ್ಣ ಮಾಹಿತಿ ಪಡೆದು ತಮ್ಮ ಕ್ಷೇತ್ರಗಳಲ್ಲಿ ಅಳಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕತ್ತರಿಸಿದ ಹಣ್ಣುಗಳ ಮಾರಾಟ ನಿಷೇಧ, ಹೋಟೆಲ್’ಗಳಿಗೆ ಜಿಲ್ಲಾಧಿಕಾರಿ ಮಹತ್ವದ ಸೂಚನೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎನ್ ಶಿವಕುಮಾರ್, ಸಹ ಸಂಶೋಧನಾ ನಿರ್ದೇಶಕರು, ವಲಯ ಕೃಷಿ ಸಂಶೋಧನಾ ಕೇಂದ್ರ, ವಿ.ಸಿ ಫಾರಂ. ಮಂಡ್ಯ ಅವರು ವಹಿಸಿದ್ದರು.
ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳ ಅಸಮತೋಲನ ಬಳಕೆಯಿಂದ ಬೆಳೆಗಳಲ್ಲಿ ಹಂತಹಂತವಾಗಿ ಉಂಟಾಗುವ ಬದಲಾವಣೆಗಳ ಬಗ್ಗೆ , ಪ್ರಮುಖವಾಗಿ ಭತ್ತದ ಬೆಂಕಿರೋಗ ನಿವಾರಣಾ ಕ್ರಮಗಳ ಬಗ್ಗೆ ತಿಳಿದುಕೊಂಡು ರೋಗ ಮತ್ತು ಕೀಟ ನಿರ್ವಹಣೆಗೆ ಸಾಧ್ಯವಾದಷ್ಟು ಪರಿಸರ ಸ್ನೇಹಿ ಸಸ್ಯ ಸಂರಕ್ಷಣಾಕ್ರಮಗಳನ್ನು ಅನುಸರಿಸಿದಲ್ಲಿ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಿ ಲಾಭಗಳಿಸಬಹುದು ಎಂದು ತಿಳಿಸಿದರು.

ವಿಜ್ಞಾನಿ ಡಾ.ಮಂಜುನಾಥ್ ಅವರ ಜೀವಜಗತ್ತು ಪುಸ್ತಕ ಬಿಡುಗಡೆ
ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದ ಡಾ. ಆತಿಶಿಪಾಂಡೆ, ಸಹಾಯಕ ನಿರ್ದೇಶಕರು, ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣೆ ಕೇಂದ್ರ, ಬೆಂಗಳೂರು, ಡಾ.ವಿವೇಕ್ ಉಪ್ಪಾರ್, ಸಸ್ಯ ಸಂರಕ್ಷಣಾಧಿಕಾರಿಗಳು, ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣೆ ಕೇಂದ್ರ, ಬೆಂಗಳೂರು ಅವರು ಕೇಂದ್ರದ ದ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದ್ದರು ಮತ್ತು ಡಾ.ಪಾವರಾಜ್ ಮತ್ತು ವಿನಯ್ ಜೆ.ಯು ಸಸ್ಯ ಸಂರಕ್ಷಣಾಧಿಕಾರಿಗಳು ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣೆ ಕೇಂದ್ರ, ಬೆಂಗಳೂರು ಅವರು ಬಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕ ಡಾ.ಕೆ.ಆರ್ ಶ್ರೀನಿವಾಸ್, ಪರಿಸರ ಸ್ನೇಹಿ ಸಮಗ್ರ ಪೀಡೆ ನಿರ್ವಹಣೆಯ ನೂತನ ತಂತ್ರಜ್ಞಾನಗಳ ವಸ್ತು ಪ್ರದರ್ಶನವನ್ನು ಏರ್ಪಡಿಸಿ ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಎರಡು ದಿನದ ತರಬೇತಿಯಲ್ಲಿ ಸಮಗ್ರ ಪೀಡೆ ನಿರ್ವಹಣೆ, ಜೈವಿಕ ಪೀಡೆನಾಶಕಗಳ ಬಳಕೆ, ತೆಂಗಿನ ರೋಗ ಹಾಗೂ ಕೀಟಗಳ ನಿರ್ವಹಣೆ, ಬೋರ್ಡೋ ದ್ರವಣ ತಯಾರಿಕೆ, ಹವಾಮಾನ ವೈಪರಿತ್ಯದಿಂದ ಕೃಷಿಯಲ್ಲಿ ಕೀಟ ಮತ್ತು ರೋಗಗಳಿಂದಾಗುವ ಪರಿಣಾಮದ ಕುರಿತು ಮಾಹಿತಿ ಹಾಗೂ ಚರ್ಚಿ ಶಿಬಿರ ಏರ್ಪಡಿಸಲಾಗಿತ್ತು. ತುಮಕೂರು ಜಿಲ್ಲೆಯ 40 ಪರಿಕರ ಮಾರಾಟಗಾರರು ಶಿಬಿರಾರ್ಥಿಗಳಾಗಿ ಬಾಗವಹಿಸಿ ಮಾಹಿತಿ ಪಡೆದುಕೊಂಡರು.

ಉದ್ಯೋಗಿನಿ ಯೋಜನೆ; 3 ಲಕ್ಷ ರೂ. ಸಾಲ, 1.50 ಲಕ್ಷ ರೂ. ಸಬ್ಸಿಡಿ! ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

About The Author

You May Also Like

More From Author

+ There are no comments

Add yours