ಗುಬ್ಬಿ ತಾಲ್ಲೂಕಿನ ಇಬ್ಬರು ನಾಪತ್ತೆ
Tumkurnews
ತುಮಕೂರು; ಗುಬ್ಬಿ ತಾಲ್ಲೂಕು ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 16 ವರ್ಷದ ನವೀನ್ ಕುಮಾರ್ ಮತ್ತು 50 ವರ್ಷದ ದೊಡ್ಡಯ್ಯ ಎಂಬ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರತ್ಯೇಕವಾಗಿ ದೂರು ಪ್ರಕರಣ ದಾಖಲಾಗಿದೆ.
ಪ್ರಕರಣ 1; ನವೀನ್ ಕುಮಾರ್ ಎಂಬುವನು ಅಕ್ಟೋಬರ್ 7ರಂದು ಬೆಳಿಗ್ಗೆ 7 ಗಂಟೆಗೆ ಚೇಳೂರು ಹೋಬಳಿ ಕಲ್ಲುಪಾಳ್ಯ ಲಂಬಾಣಿ ತಾಂಡ್ಯ ಗ್ರಾಮದ ತನ್ನ ಮನೆಯಿಂದ ಹೋದವನು ಮರಳಿ ಬಂದಿರುವುದಿಲ್ಲವೆಂದು ಈತನ ತಾಯಿ ಕಾಳಮ್ಮ ಠಾಣೆಗೆ ದೂರು ನೀಡಿದ್ದಾರೆ. ಈತನು ಸುಮಾರು 5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಹಸಿರು ಟೀ ಷರ್ಟ್, ಹಳದಿ ಬಣ್ಣದ ಜರ್ಕಿನ್ ಧರಿಸಿದ್ದನು.
ಪ್ರಕರಣ 2; ದೊಡ್ಡಯ್ಯ ಎಂಬುವನು ಅಕ್ಟೋಬರ್ 22ರಂದು ಬೆಳಿಗ್ಗೆ 9.30 ಗಂಟೆಗೆ ಚೇಳೂರು ಹೋಬಳಿ ಸಾರಿಗೆ ಪಾಳ್ಯದ ತನ್ನ ಮನೆಯಿಂದ ಹೋದವನು ಮರಳಿ ಬಂದಿರುವುದಿಲ್ಲವೆಂದು ಈತನ ಪತ್ನಿ ಅನುಸೂಯಮ್ಮ ಠಾಣೆಗೆ ದೂರು ನೀಡಿದ್ದಾರೆ. ಈತನು ಸುಮಾರು 5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ತುಂಬು ತೋಳಿನ ಚೌಕುಳಿ ಅಂಗಿ, ಕಪ್ಪು ಹಾಗೂ ಮಾಸಲು ಬಣ್ಣದ ಲುಂಗಿ ಧರಿಸಿದ್ದನು.
ಕಾಣೆಯಾದವರ ಬಗ್ಗೆ ಸುಳಿವು ಸಿಕ್ಕಲ್ಲಿ ದೂ.ವಾ.ಸಂ. 0816-2272451, 2278000, 08131-222210 ಅಥವಾ ಮೊ.ಸಂ. 9480802961ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಮನವಿ ಮಾಡಿದ್ದಾರೆ.
+ There are no comments
Add yours