ಕೌಟುಂಬಿಕ ಕಲಹ; ಪತ್ನಿ ಹಾಗೂ ಮಗುವನ್ನು ಭೀಕರವಾಗಿ ಹತ್ಯೆ ಮಾಡಿದ ಪತಿ

1 min read

ಕೌಟುಂಬಿಕ ಕಲಹ; ಪತ್ನಿ ಹಾಗೂ ಮಗುವನ್ನು ಭೀಕರವಾಗಿ ಹತ್ಯೆ ಮಾಡಿದ ಪತಿ

Tumkurnews
ತುಮಕೂರು; ಕೌಟುಂಬಿಕ ಕಲಹದಿಂದ ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು ನಾಲ್ಕು ವರ್ಷದ ಮಗುವನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ‌.

ವಿದ್ಯಾರ್ಥಿನಿಯ ಜೀವ ಕಸಿದ ಪಿಯು ಅಂಕಪಟ್ಟಿ
ಗುಬ್ಬಿ ತಾಲ್ಲೂಕು ಕೊಂಡ್ಲಿ ಸಮೀಪದ ಮಾವಿನಹಳ್ಳಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಕಾವ್ಯ(25), ಜೀವನ್(4) ಕೊಲೆಯಾದವರು. ಹತ್ಯೆ ಮಾಡಿದ ಪತಿ ಸ್ವಾಮಿ(36) ಪರಾರಿಯಾಗುವ ವೇಳೆ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮನೆ ಬಿಟ್ಟು ಹೋಗಿದ್ದಳು; ಆರು ವರ್ಷಗಳ ಹಿಂದೆ ಮದುವೆಯಾಗಿದ್ದ ಸ್ವಾಮಿ ಮತ್ತು ಕಾವ್ಯ ನಡುವೆ ಜಗಳವಾಗಿ ಕಳೆದ ನಾಲ್ಕು ವರ್ಷಗಳ ಹಿಂದೆಯೇ ಕಾವ್ಯ ಮನೆ ಬಿಟ್ಟು ಹೋಗಿದ್ದಳು. ರಾಜಿ ಪಂಚಾಯತಿ ನಡೆದು ಕಳೆದ ನಾಲ್ಕು ದಿನಗಳ ಹಿಂದಷ್ಟೇ ಕಾವ್ಯ ಪತಿಯ ಮನೆಗೆ ಬಂದಿದ್ದಳು.
ಪುನಃ ಜಗಳ; ನಾಲ್ಕು ವರ್ಷಗಳ ಬಳಿಕ ಒಂದಾಗಿದ್ದ ದಂಪತಿ ನಡುವೆ ಪುನಃ ಜಗಳ ಪ್ರಾರಂಭವಾಗಿತ್ತು. ಕಳೆದ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಪತಿ ಸ್ವಾಮಿ, ಹಾರೆಯಿಂದ ಪತ್ನಿ ಹಾಗೂ ಮಗುವಿನ ತಲೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ.

ತುಮಕೂರು ಖಾಸಗಿ ಬಸ್‌‌ ನಿಲ್ದಾಣದಲ್ಲಿ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ
ಕೃತ್ಯದ ಬಳಿಕ ಆರೋಪಿ ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು ಹಿಡಿದು ಪೊಲೀಸರು ಬರುವವರೆಗೂ ಕಾದು ಬಳಿಕ ಚೇಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ‌. ಸ್ಥಳಕ್ಕೆ ಗುಬ್ಬಿ ಸಿಪಿಐ ನದಾಫ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

About The Author

You May Also Like

More From Author

+ There are no comments

Add yours