ತುಮಕೂರು ಖಾಸಗಿ ಬಸ್‌‌ ನಿಲ್ದಾಣದಲ್ಲಿ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ

1 min read

ಮಾರಾಕಾಸ್ತ್ರಗಳಿಂದ ಚುಚ್ಚಿ ವ್ಯಕ್ತಿಯ ಕೊಲೆ

Tumkurnews
ತುಮಕೂರು; ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವನ ಭೀಕರ ಹತ್ಯೆ ನಡೆದಿದೆ. ಮುಬಾರಕ್ ಪಾಷಾ ಕೊಲೆಯಾದ ದುರ್ದೈವಿ.
ತುಮಕೂರು ನಗರದ ಜಿಸಿಆರ್ ಕಾಲೋನಿ ನಿವಾಸಿಯಾದ ಈತ ಕಳೆದ ರಾತ್ರಿ ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಬಂದಿದ್ದನು. ಈ ವೇಳೆ ಯಾರೋ ಅಪರಿಚಿತರು ಮಾರಾಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಿದ್ದಾರೆ.
ಕೊಲೆಯಾದ ವ್ಯಕ್ತಿ ನಗರದ ಗುಬ್ಬಿ ಗೇಟ್ ಬಳಿ ಹಮಾಲಿ ಕೆಲಸ ಮಾಡಿಕೊಂಡಿದ್ದನು. ಯಾರೊಂದಿಗೋ ಗಲಾಟೆ ಮಾಡಿಕೊಂಡು ಈತ ಕೊಲೆಯಾಗಿರುವ ಶಂಕೆ ಇದೆ. ಕೊಲೆಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
ಬೆಚ್ಚಿ ಬಿದ್ದ ಜನ; ವಿವಿಧ ಕಾರ್ಯ ನಿಮಿತ್ತ ಇಂದು ಬೆಳಗ್ಗೆ ಖಾಸಗಿ ಬಸ್ ನಿಲ್ದಾಣಕ್ಕೆ ಬಂದ ಜನ ಬಸ್ ನಿಲ್ದಾಣದಲ್ಲಿ ಮೃತ ದೇಹ ನೋಡಿ ಬೆಚ್ಚಿ ಬಿದ್ದರು. ಕೊಲೆಯಾದ ಜಾಗದಲ್ಲಿ ರಕ್ತ ಚೆಲ್ಲಾಡಿದ್ದು, ಗಲಾಟೆ ಮಾಡಿಕೊಂಡು ಕೊಲೆಯಾಗಿರುವ ರೀತಿಯಲ್ಲಿ ಕಂಡು ಬರುತ್ತಿದೆ. ಒಟ್ಟಾರೆಯಾಗಿ ತನಿಖೆ ಬಳಿಕ ಕೊಲೆಗೆ ಕಾರಣ ತಿಳಿಯಲಿದೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

About The Author

You May Also Like

More From Author

+ There are no comments

Add yours