ವಿದ್ಯಾರ್ಥಿನಿಯ ಜೀವ ಕಸಿದ ಪಿಯು ಅಂಕಪಟ್ಟಿ

1 min read

 

ವಿದ್ಯಾರ್ಥಿನಿಯ ಜೀವ ಕಸಿದ ಪಿಯು ಅಂಕಪಟ್ಟಿ

Tumkurnews
ತುಮಕೂರು; ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮನನೊಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲ್ಲೂಕು ಪ್ರಿಯದರ್ಶಿನಿ ಕಾಲೇಜು ವಿದ್ಯಾರ್ಥಿನಿ ಗುಣಶ್ರೀ(16) ಮೃತ ದುರ್ದೈವಿ. ಈಕೆ ಕಾಮರ್ಸ್ ವಿಷಯದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.
ಇತ್ತೀಚೆಗೆ ನಡೆದ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಈಕೆ ಕಡಿಮೆ ಅಂಕ ಪಡೆದಿದ್ದಳು. ಕಾಲೇಜಿನಲ್ಲಿ ಅಂಕಪಟ್ಟಿ ನೀಡಿ ಪೋಷಕರ ಸಹಿ ಹಾಕಿಸಿಕೊಂಡು ಬರುವಂತೆ ತಿಳಿಸಿದ್ದರು. ಕಡಿಮೆ ಅಂಕ ಬಂದಿರುವುದು ಮನೆಯಲ್ಲಿ ಗೊತ್ತಾದರೆ ಬೈಯುತ್ತಾರೆ ಎಂದು ಹೆದರಿದ ವಿದ್ಯಾರ್ಥಿನಿಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

About The Author

You May Also Like

More From Author

+ There are no comments

Add yours