ಮುಸ್ಲೀಮರಲ್ಲೂ ಜಾತಿ ಪದ್ದತಿ- ಪಿಂಜಾರ, ನದಾಫ್ ಉಪಜಾತಿಗೆ ವಿಶೇಷ ಮೀಸಲಾತಿಗೆ ಆಗ್ರಹ
Tumkurnews
ತುಮಕೂರು; ಹಿಂದೂ ಧರ್ಮದಲ್ಲಿ ಮಾತ್ರ ಜಾತಿ ಪದ್ದತಿ ಇದೆ ಎಂದು ಬಹುತೇಕರು ಅಂದುಕೊಂಡಿದ್ದಾರೆ. ಆದರೆ ಇಸ್ಲಾಂ ಧರ್ಮದಲ್ಲೂ ಜಾತಿ, ಉಪಜಾತಿಗಳು ಇವೆ. ಅವರೂ ಕೂಡ ವಿಶೇಷ ಮೀಸಲಾತಿಗೆ ಆಗ್ರಹಿಸಿದ್ದಾರೆ.
ಮುಸ್ಲಿಂ ಸಮುದಾಯದಲ್ಲಿನ ಪಿಂಜಾರ ಮತ್ತು ನದಾಫ್ ಉಪ ಜಾತಿಗಳು ವಿಶೇಷ ಮೀಸಲಾತಿಗಾಗಿ ಸರ್ಕಾರಕ್ಕೆ ಮನವಿ ಮಾಡಿವೆ. ಇಸ್ಲಾಂ ಧರ್ಮದಲ್ಲಿನ ಉಪಜಾತಿಗಳಾದ ಪಿಂಜಾರ ಮತ್ತು ನದಾಫ್ ಪಂಗಡಗಳಿಗೆ ಪ್ರವರ್ಗ-1ರ ಮೀಸಲಾತಿ ಕೊಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಮುಸ್ಲಿಂ ಸಮುದಾಯದಲ್ಲಿರುವ ಪಿಂಜಾರ ನದಾಫ್ ಉಪಜಾತಿಯವರಿಗೆ ಪ್ರವರ್ಗ -1 ರ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಪಿಂಜಾರ, ನದಾಫ್ ಸಂಘ ಕೊರಟಗೆರೆ ತಹಸೀಲ್ದಾರ್ ನಹಿದಾ ಜಂಜಂ ಅವರಿಗೆ ಮನವಿ ಸಲ್ಲಿಸಿದೆ.
ತುಮಕೂರು; ಮುಸ್ಲೀಮರ ಧಾರ್ಮಿಕ ಧ್ವಜಕ್ಕೆ ಬೆಂಕಿ; ಇಬ್ಬರ ಬಂಧನ; video
ಧಾರ್ಮಿಕವಾಗಿ ಇಸ್ಲಾಂ ಧರ್ಮದ ಅನುಯಾಯಿಗಳಾಗಿರುವ ಪಿಂಜಾರ, ನದಾಫ್ ಸಮುದಾಯದವರು ಶಾಲಾ ದಾಖಲಾತಿ ಪಡೆಯುವಾಗ ಮುಸ್ಲಿಂ ಎಂದಷ್ಟೇ ನಮೂದಿಸಲಾಗಿದೆ. ಉಪ ಜಾತಿ ನಮೂದಿಸಲಾಗಿಲ್ಲ. ಇದಕ್ಕೆ ಸಂಬಧಿಸಿದಂತೆ ರಾಜ್ಯ ಸರ್ಕಾರದ ಆದೇಶದಂತೆ ಪಿಂಜಾರ ಪಂಗಡದರು ಪ್ರವರ್ಗ -1 ರ ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಹರಾಗಿರುತ್ತಾರೆ . ತುಮಕೂರು ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಅಲ್ಪಸಂಖ್ಯಾತರ ಆಯೋಗ ನೀಡಿರುವ ಆದೇಶದಲ್ಲಿ ಸ್ಪಷ್ಟವಾಗಿ ತಿಳಿದಿರುವಂತೆ ನಮ್ಮ ಸಂಘದ ಪ್ರಮಾಣ ಪತ್ರವನ್ನೇ ದಾಖಲೆಯನ್ನಾಗಿ ಪರಿಗಣಿಸಿ ಅಫಿಡೆವಿಟ್ ಪಡೆದುಕೊಂಡು ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
+ There are no comments
Add yours