Tumkurnews
ತುಮಕೂರು; ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ನೀರು ಪಾಲಾಗಿರುವ ಘಟನೆ ನಡೆದಿದೆ.
ಗುಬ್ಬಿ ತಾಲ್ಲೂಕು ಕಡಬ ಹೋಬಳಿಯ ಕಲ್ಲೂರು ಕೆರೆಯಲ್ಲಿ ಕಳೆದ ರಾತ್ರಿ ಕಾಲು ತೊಳೆಯಲು ಹೋಗಿ ಇಬ್ಬರು ನೀರು ಪಾಲಾಗಿದ್ದಾರೆ. ನಟರಾಜು(30) ಹಾಗೂ ಹನುಮಂತ(30) ಮೃತ ದುರ್ದೈವಿಗಳು.
ತುಮಕೂರು ಜಿಲ್ಲೆಯಲ್ಲಿ ಭಾರೀ ಮಳೆ; ಮಹಿಳೆ ಬಲಿ, ಕೊಚ್ಚಿಹೋದ ಕಾರು
ಪಾವಗಡದಲ್ಲೂ ದುರಂತ; ಮತ್ತೊಂದು ಪ್ರಕರಣದಲ್ಲಿ ಪಾವಗಡ ತಾಲ್ಲೂಕು ಕೆಂಚಗಾನಹಳ್ಳಿ ಗ್ರಾಮದ ಗಂಗಾಧರ್ ಎಂಬ ಯುವಕ ಭಾನುವಾರ ಸಂಜೆ ರಸ್ತೆ ದಾಟುವ ವೇಳೆ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಎರಡು ಜಲದುರಂತಗಳಾಗಿದ್ದು, ಜನ ಭೀತಿಗೊಂಡಿದ್ದಾರೆ.
(ಚಿತ್ರ; ಪಾವಗಡ ತಾಲ್ಲೂಕು ಕೆಂಚಗಾನಹಳ್ಳಿಯಲ್ಲಿ ಘಟನೆ ನಡೆದ ಸ್ಥಳದಲ್ಲಿ ನೆರೆದಿದ್ದ ಜನ)
+ There are no comments
Add yours