ಮುಸ್ಲೀಮರ ಧ್ವಜ ಸುಟ್ಟ ಪ್ರಕರಣ; ಇಬ್ಬರು ಆರೋಪಿಗಳ ಬಂಧನ
Tumkurnews
ತುಮಕೂರು; ಈದ್ ಮಿಲಾದ್ ಹಬ್ಬದ ದಿನ ಶಿರಾದಲ್ಲಿ ಮುಸ್ಲಿಮರ ಧಾರ್ಮಿಕ (ಹಸಿರು) ಧ್ವಜ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.
ಗ್ರಾನೈಟ್ ಕೆಲಸ ಮಾಡುವ ರಮೇಶ್(25) ಹಾಗೂ ಪೇಂಟಿಂಗ್ ಕೆಲಸ ಮಾಡುವ ದೇವಿ ಪ್ರಸಾದ್(19) ಬಂಧಿತ ಆರೋಪಿಗಳು.
ಹಬ್ಬದ ದಿನ ಧ್ವಜ ಸುಟ್ಟ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಶಿರಾದ ದರ್ಗಾ ಸರ್ಕಲ್’ನಲ್ಲಿ ಮುಸ್ಲೀಮರು ಪ್ರತಿಭಟನೆ ನಡೆಸಿದ್ದರು. ಶಿರಾ ಮತೀಯ ಸೂಕ್ಷ್ಮ ಪ್ರದೇಶವಾದ ಹಿನ್ನೆಲೆಯಲ್ಲಿ ಖುದ್ದು ಎಸ್.ಪಿ ರಾಹುಲ್ ಕುಮಾರ್ ಶಹಪುರವಾಡ್ ಸ್ಥಳಕ್ಕೆ ತೆರಳಿ ತಪ್ಪಿತಸ್ಥರನ್ನು ಬಂಧಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದರು. ಅದರಂತೆ ಇಂದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪತಿ, ಪತ್ನಿ ಮಗು ಸೇರಿ ಮೂವರು ಸಾವು; ಶಿರಾ ಅಪಘಾತದಲ್ಲಿ ವಿಧಿಯ ಕ್ರೂರತೆ
+ There are no comments
Add yours