ತುಮಕೂರು; ಗ್ರಾಪಂ ಸದಸ್ಯ ಕಿಡ್ನಾಪ್! ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ

1 min read

 

ಗ್ರಾಪಂ ಸದಸ್ಯ ಕಿಡ್ನಾಪ್; ಸಿಸಿ ಟಿವಿಯಲ್ಲಿ ಕೃತ್ಯ ಸೆರೆ

Tumkurnews
ತುಮಕೂರು; ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸಿದ್ಧತೆ ನಡೆಸಿದ್ದ ಗ್ರಾಪಂ ಸದಸ್ಯನೋರ್ವನನ್ನು ಅಪಹರಣ ಮಾಡಿರುವ ಘಟನೆ ನಡೆದಿದ್ದು, ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕುಣಿಗಲ್ ತಾಲ್ಲೂಕು ನಿಡಸಾಲೆ ಗ್ರಾಪಂ ಅಧ್ಯಕ್ಷೆ ಪುಟ್ಟಲಿಂಗಮ್ಮ ವಿರುದ್ಧ ಇಂದು ಅವಿಶ್ವಾಸ ‌ನಿರ್ಣಯ ಮಂಡನೆ ಇತ್ತು.‌ ಭ್ರಷ್ಟಾಚಾರದ ಆರೋಪದಲ್ಲಿ ಅಧ್ಯಕ್ಷೆಯನ್ನು ಅಧಿಕಾರದಿಂದ ಕೆಳಗಿಳಿಸಲು ಕೆಲವು ‌ಸದಸ್ಯರು‌ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದರು. ಈ ಪ್ರಕ್ರಿಯೆಯಲ್ಲಿ ಸದಸ್ಯ ಮಂಜುನಾಥ್ ಎಂಬುವರು ‌ಮುಂಚೂಣಿಯಲ್ಲಿದ್ದರು. ಇದರ ಬೆನ್ನಲ್ಲೇ ಕಳೆದ ರಾತ್ರಿ ಸದಸ್ಯ ‌ಮಂಜುನಾಥ್ ಅವರ ಅಪಹರಣವಾಗಿದೆ.
ಕಾರಿನಲ್ಲಿ ಕಿಡ್ನಾಪ್; ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 75ರ ಯಡಿಯೂರು ಸಮೀಪದ ಧರಣಿ ಹೋಟೆಲ್ ಮುಂಭಾಗದಲ್ಲಿ ಗ್ರಾಪಂ‌ ಸದಸ್ಯ ಮಂಜುನಾಥ್ ಅವರನ್ನು ಅಪಹರಿಸಲಾಗಿದೆ. ಕೆಂಪು ಬಣ್ಣದ ಕಾರಿನಲ್ಲಿ ಬಂದ ನಾಲ್ವರು ಮಂಜುನಾಥ್ ಅವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅಮೃತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

About The Author

You May Also Like

More From Author

+ There are no comments

Add yours