Tumkurnews
ತುಮಕೂರು; ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಿಡಸಾಲೆ ಗ್ರಾಮ ಪಂಚಾಯತ್ ಜೆಡಿಎಸ್ ಬೆಂಬಲಿತ ಸದಸ್ಯ ಮಂಜುನಾಥ್ ಕಿಡ್ನಾಪ್ ಪ್ರಕರಣಕ್ಕೆ ರೋಚಕ ತಿರುವು ಲಭಿಸಿದೆ.
‘ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ, ನನಗೆ ರಾಜಕೀಯ ಜೀವನ ಬೇಡ ಎನ್ನಿಸುತ್ತಿದೆ’ ಎಂದು ಸ್ವತಃ ಮಂಜುನಾಥ್ ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ. ಅಜ್ಞಾತ ಸ್ಥಳದಿಂದ 11 ಸೆಕೆಂಡ್’ಗಳ ವಿಡಿಯೋ ಮಾಡಿ ಹರಿಯಬಿಟ್ಟಿರುವ ಮಂಜುನಾಥ್, ‘ನಾನಾಗಿ ನಾನು ಬಂದಿದ್ದೇನೆ, ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ’ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ತುಮಕೂರು; ಗ್ರಾಪಂ ಸದಸ್ಯ ಕಿಡ್ನಾಪ್! ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ
ಈ ಹೇಳಿಕೆ ಬೆನ್ನಲ್ಲೇ ಮಂಜುನಾಥ್ ಅವರಿಗೆ ಯಾರಾದರೂ ಬೆದರಿಸಿ ಹೇಳಿಕೆ ಕೊಡಿಸಿದ್ದಾರೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ.
ಕುಣಿಗಲ್ ರಿಂಗ್ ರಸ್ತೆಯಲ್ಲಿ ಭೀಕರ ಅಪಘಾತ; ತುಮಕೂರಿನ ವ್ಯಕ್ತಿ ಸಾವು
ಪ್ರಕರಣದ ಹಿನ್ನೆಲೆ; ನಿಡಸಾಲೆ ಗ್ರಾಪಂನ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷೆ ಪುಟ್ಟಲಿಂಗಮ್ಮ ಅವರ ವಿರುದ್ಧ ಗುರುವಾರ ಅವಿಶ್ವಾಯ ನಿರ್ಣಯ ಮಂಡನೆಗೆ ದಿನ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಗ್ರಾಪಂ ಸದಸ್ಯ ಮಂಜುನಾಥ್’ರನ್ನು ದುಷ್ಕರ್ಮಿಗಳು ಸಿನಿಮಿಯ ರೀತಿಯಲ್ಲಿ ಕಿಡ್ನಾಪ್ ಮಾಡಿದ್ದರು. ಆದರೆ ಇದೀಗ ಸ್ವತಃ ಮಂಜುನಾಥ್ ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಪೊಲೀಸ್ ತನಿಖೆ ಬಳಿಕ ಎಲ್ಲಾ ವಿಷಯಗಳು ಬಯಲಾಗಬೇಕಿದೆ.
+ There are no comments
Add yours