Tumkurnews
ತುಮಕೂರು; 13 ವರ್ಷ ಪತ್ನಿಯ ಜೊತೆ ಸಂಸಾರ ಮಾಡಿದ್ದ ಪತಿಯೋರ್ವ ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಧುಗಿರಿ ತಾಲ್ಲೂಕಿನಲ್ಲಿ ನಡೆದಿದೆ.
ಮಧುಗಿರಿ ತಾಲ್ಲೂಕಿನ ಬೆಡತ್ತೂರು ಗ್ರಾಮದ ಪುಷ್ಪಲತಾ ಕೊಲೆಯಾದಾಕೆ. ಕೃತ್ಯದ ಬಳಿಕ ಆರೋಪಿ ಪತಿ ರಾಮಾಂಜನೇಯ ತಲೆ ಮರೆಸಿಕೊಂಡಿದ್ದಾನೆ.
13 ವರ್ಷಗಳ ಹಿಂದೆ ಮದುವೆಯಾಗಿದ್ದ ಈ ಜೋಡಿ ನಡುವೆ ಕಳೆದ ಕೆಲ ದಿನಗಳಿಂದ ಮನಸ್ತಾಪ ಉಂಟಾಗಿತ್ತು, ಪತ್ನಿಯ ಶೀಲ ಶಂಕಿಸಿ ಪತಿ ರಾಮಾಂಜನೇಯ ಆಗಾಗ ಮನೆಯಲ್ಲಿ ಜಗಳ ಮಾಡುತ್ತಿದ್ದನು ಎನ್ನಲಾಗಿದೆ. ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
(ಒಳಚಿತ್ರ; ಆರೋಪಿ ರಾಮಾಂಜನೇಯ)
ಎಸ್.ಎಸ್ ಬಾರ್ ಸಿಬ್ಬಂದಿಯಿಂದ ಗ್ರಾಹಕನ ಕೊಲೆ; ಐವರು ಪೊಲೀಸ್ ವಶಕ್ಕೆ
+ There are no comments
Add yours