ರಾಜ್ಯದಲ್ಲಿ ಏಳನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಪಾದಯಾತ್ರೆ
Tumkurnews
ತುಮಕೂರು; ಮೂರು ದಿನಗಳ ಕಾಲ ಮಂಡ್ಯ ಜಿಲ್ಲೆಯಲ್ಲಿ ಭರ್ಜರಿಯಾಗಿ ಸಾಗಿ ಬಂದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಪಾದಯಾತ್ರೆ ಶನಿವಾರ ಬೆಳಗ್ಗೆ ತುಮಕೂರು ಜಿಲ್ಲೆಯನ್ನು ಪ್ರವೇಶಿಸಿದೆ.
ಬೆಳಗ್ಗೆ 6.30ಕ್ಕೆ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮಾಯಸಂದ್ರದ ಪೊಲೀಸ್ ಠಾಣೆ ಬಳಿಯಿಂದ ಆರಂಭವಾದ ಪಾದಯಾತ್ರೆ ಬೆಳಗ್ಗೆ 11 ಗಂಟೆ ವೇಳೆಗೆ ಹರಳೀಕೆರೆ ಪಾಳ್ಯದ ಕಾಸ್ಮೋಪಾಲಿಟನ್ ಕ್ಲಬ್ ಬಳಿ ವಿಶ್ರಾಂತಿ ಪಡೆಯಲಿದೆ.
ಭಾರತ್ ಜೋಡೋ ಯಾತ್ರೆಯ ಯಶಸ್ಸು ನೋಡಿ ಬಿಜೆಪಿಯವರಿಗೆ ಉರಿ ಶುರುವಾಗಿದೆ; ಪರಮೇಶ್ವರ್
ನಂತರ ಸಂಜೆ ನಾಲ್ಕು ಗಂಟೆಗೆ ಭೋಜನ ವಿರಾಮದ ಬಳಿಕ ಯಾತ್ರೆ ಪುನಾರಂಭವಾಗಲಿದೆ. ರಾತ್ರಿ 7 ಗಂಟೆಗೆ ಹರಿದಾಸನಹಳ್ಳಿಗೆ ತಲುಪಲಿರುವ ಯಾತ್ರೆಯು ಕಾರ್ನರ್ ಮೀಟಿಂಗ್ ಮುಗಿದ ಬಳಿಕ ಬಾಣಸಂದ್ರದ ವಿಎಸ್‌ಎಸ್ ಜೂನಿಯರ್ ಕಾಲೇಜ್ ಬಳಿ ವಾಸ್ತವ್ಯ ಮಾಡಲಿದೆ. ಈ ವೇಳೆಗೆ ಒಟ್ಟು 23 ಕಿ.ಮೀವರೆಗೆ ರಾಹುಲ್ ಗಾಂಧಿ ಹೆಜ್ಜೆ ಹಾಕಲಿದ್ದಾರೆ.
ಸ್ವಕ್ಷೇತ್ರದಲ್ಲೇ ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ಆಕ್ರೋಶ!
ಶಾಸಕ ಶ್ರೀನಿವಾಸ್ ಭಾಗಿ; ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಗುಬ್ಬಿ ಕ್ಷೇತ್ರದ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್ ಶ್ರೀನಿವಾಸ್ ಕೂಡ ಹೆಜ್ಜೆ ಹಾಕಿದರು. ಈ ಮೂಲಕ ತಾವು ಕಾಂಗ್ರೆಸ್ ಸೇರ್ಪಡೆ ವಿಚಾರ ಮತ್ತಷ್ಟು ಗಟ್ಟಿಯಾಗುವಂತೆ ನಡೆದುಕೊಂಡರು.
ಜೆಡಿಎಸ್ ಶಾಸಕ ಎಂ.ವಿ ವೀರಭದ್ರಯ್ಯ ಚುನಾವಣೆ ನಿವೃತ್ತಿ ಘೋಷಣೆ!; ಕಾರಣವೇನು? ವಿಡಿಯೋ
+ There are no comments
Add yours