ತುಮಕೂರು; ಭಾರತ್ ಜೋಡೋ ಯಾತ್ರೆಯಲ್ಲಿ 30 ಸಾವಿರ ಮಂದಿ ಭಾಗಿ! ಬೆರಗಾದ ಕಾಂಗ್ರೆಸ್

1 min read

 

Tumkurnews
ತುಮಕೂರು; ಜಿಲ್ಲೆಯ ತುರುವೇಕೆರೆ ತಾಲ್ಲೂಕಿನಿಂದ ಶನಿವಾರ ಆರಂಭವಾದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ‌ ಪಾದಯಾತ್ರೆಯಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದು, ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು.
ಬೆಳಗ್ಗೆ 6.30ರ ಸಮಯದಲ್ಲಿ ಮಾಯಸಂದ್ರ ಪೊಲೀಸ್ ಠಾಣೆ ಎದುರಿನಲ್ಲಿ ಮಹಿಳೆಯರು 108 ಪೂರ್ಣಕುಂಭ ಸ್ವಾಗತದೊಂದಿಗೆ ಯಾತ್ರೆಯನ್ನು ಬರಮಾಡಿಕೊಂಡರು. ಇದೇ ವೇಳೆ ದಸಂಸ ಮುಖಂಡ ಕೆ.ಟಿ ಮುರುಳಿ ಮೋಹನ್ ನೇತೃತ್ವದಲ್ಲಿ ರಾಹುಲ್ ಗಾಂಧಿಗೆ ಬುದ್ಧ ಮೂರ್ತಿಯನ್ನು ಕೊಡುಗೆ ನೀಡಲಾಯಿತು. ಹಾಗೂ ದೇಶದಲ್ಲಿ ನಡೆಯುತ್ತಿರುವ ದಲಿತರ ಹತ್ಯೆ, ಸ್ಥಳೀಯ ಸಮಸ್ಯೆ ಮತ್ತು ದಲಿತರ ಮೇಲಿನ ದೌರ್ಜನ್ಯದ ಕುರಿತು ರಾಹುಲ್ ಗಾಂಧಿ ಅವರೊಂದಿಗೆ ದಲಿತ ಮುಖಂಡರು ಚರ್ಚೆ ನಡೆಸಿದರು. ಬಳಿಕ ಟಿ.ಬಿ ಕ್ರಾಸ್ ಕಡೆಗೆ ಪಾದಯಾತ್ರೆ ಮುಂದುವರೆಯಿತು.

ರಾಜ್ಯದಲ್ಲಿ 7ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ; ತುಮಕೂರಿನಲ್ಲಿ ರಾಹುಲ್ ಸಂಚಲನ
30 ಸಾವಿರ ಮಂದಿ ಭಾಗಿ; ತುರುವೇಕೆರೆ ತಾಲ್ಲೂಕಿನಲ್ಲಿ ನಡೆದ ಇಂದಿನ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಸುಮಾರು 30 ಸಾವಿರ ಮಂದಿ ಪಾಲ್ಗೊಂಡಿದ್ದರು. ಈ ಜನಸಾಗರವನ್ನು ನಿಭಾಯಿಸಲು 700ಕ್ಕೂ‌ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು.
40 ಕಡೆ ಊಪಹಾರ; ಸಾಗರದಂತೆ ಹರಿದುಬಂದ ಜನಸಾಗರಕ್ಕೆ ದಾರಿಯುದ್ದಕ್ಕೂ ‌ಸುಮಾರು 40 ಕಡೆಗಳಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಲಘು ಉಪಾಹಾರ, ಕಿತ್ತಳೆ, ಸೇಬು, ಬಾಳೆ ಹಣ್ಣು, ನೀರು, ಮಜ್ಜಿಗೆ, ರೆಡಿ ಫುಡ್ ಸೇರಿದಂತೆ ಅನೇಕ ಬಗೆಯ ಉಪಹಾರಗಳನ್ನು ವಿತರಿಸಲಾಯಿತು. ಪಾದಯಾತ್ರೆಯಲ್ಲಿ ಪಾಲ್ಗೊಂಡ ಯಾರೊಬ್ಬರೂ ಹಸಿವು, ನೀರಡಿಕೆಯಿಂದ ಬಳಲದಂತೆ ನೋಡಿಕೊಳ್ಳಲಾಗಿತ್ತು. ಸುಮಾರು 20 ಸಾವಿರ ಮಂದಿ ಈ ಊಟೋಪಚಾರದ ಸೌಲಭ್ಯ ಪಡೆದುಕೊಂಡರು.
ದೇಶ ಭಕ್ತಿಗೀತೆ ಪ್ರಸಾರ; ಪಾದಯಾತ್ರೆಯುದ್ದಕ್ಕೂ ದೇಶಭಕ್ತಿ ಗೀತೆಗಳನ್ನು ಪ್ರಸಾರ ಮಾಡಲಾಯಿತು. ಹಿಂದಿ, ಇಂಗ್ಲಿಷ್, ಹಿಂದಿಯಲ್ಲಿ ಮೂಡಿ ಬಂದ ದೇಶಭಕ್ತಿ ಗೀತೆಗಳು ಪಾದಯಾತ್ರಿಗಳನ್ನು ಹುರಿದುಂಬಿಸಿತು. ಹಾದಿಯುದ್ದಕ್ಕೂ ಬೃಹತ್ ಕಟೌಟ್, ಫ್ಲೆಕ್ಸ್’ಗಳು ರಾರಾಜಿಸಿದವು.

ಭಾರತ್ ಜೋಡೋ ಯಾತ್ರೆಯ ಯಶಸ್ಸು ನೋಡಿ ಬಿಜೆಪಿಯವರಿಗೆ ಉರಿ ಶುರುವಾಗಿದೆ; ಪರಮೇಶ್ವರ್
ಮುಖಂಡರ ಸಾಥ್; ಭಾರತ್ ಜೋಡೋ ಯಾತ್ರೆಯಲ್ಲಿ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ಮಾಜಿ ಶಾಸಕ ಕೆ.ಎನ್ ರಾಜಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜ್, ಬೆಸ್ಕಾಂ ನಿರ್ದೇಶಕ ಬಿ.ಎಸ್ ವಸಂತ ಕುಮಾರ್, ಜಯರಾಂ ರಮೇಶ್ ಮತ್ತಿತರರು ರಾಹುಲ್ ಗಾಂಧಿಗೆ ಸಾಥ್ ನೀಡಿದರು. ಯಾತ್ರೆಗೆ ಸಿಕ್ಕ ಅಭೂತಪೂರ್ವ ಜನಬೆಂಬಲ ಕಂಡು ಸ್ವತಃ ಕಾಂಗ್ರೆಸ್ ನಾಯಕರು ಬೆರಗಾಗಿದ್ದು ಕಂಡು ಬಂದಿತು.

About The Author

You May Also Like

More From Author

+ There are no comments

Add yours