ಭಾರತ್ ಜೋಡೋ ಯಾತ್ರೆಯ ಯಶಸ್ಸು ನೋಡಿ ಬಿಜೆಪಿಯವರಿಗೆ ಉರಿ ಶುರುವಾಗಿದೆ; ಪರಮೇಶ್ವರ್

1 min read

 

ಭಾರತ್ ಜೋಡೋ ಯಾತ್ರೆಯ ಯಶಸ್ಸು ನೋಡಿ ಬಿಜೆಪಿಯವರಿಗೆ ಉರಿ ಶುರುವಾಗಿದೆ; ಪರಮೇಶ್ವರ್

Tumkurnews
ತುಮಕೂರು; ಭಾರತ್ ಜೋಡೋ ಯಾತ್ರೆಗೆ ಜನರಿಂದ‌ ಸಿಗುತ್ತಿರುವ ಪ್ರತಿಕ್ರಿಯೆ, ಯಾತ್ರೆಯ ಯಶಸ್ಸನ್ನು ಕಂಡು ಬಿಜೆಪಿಗೆ ಎಲ್ಲೆಲ್ಲೋ ಉರಿ ಶುರುವಾಗಿದೆ ಎಂದು‌ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಲೇವಡಿ ಮಾಡಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಭಾರತ್ ತೋಡೋ ಕೆಲಸವನ್ನು ಮಾಡುತ್ತಿದೆ. ಅದನ್ನು ಜನರಿಗೆ ತಿಳಿಸಲು ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ. ನಮ್ಮ ಯಾತ್ರೆಗೆ ಜನರಿಂದ ಉತ್ತಮವಾದ ಪ್ರತಿಕ್ರಿಯೆ ದೊರೆಯುತ್ತಿದ್ದು, ಯಾತ್ರೆ ಯಶಸ್ವಿಯಾಗುತ್ತಿದೆ. ಇದನ್ನು ಕಂಡು ಬಿಜೆಪಿಗೆ ಭಯವಾಗಿದೆ, ಬೆಂಕಿ ಇಟ್ಟುಕೊಂಡ ಹಾಗೆ ಆಗಿದೆ. ಹಾಗಾಗಿ ಯಾತ್ರೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಸಾವರ್ಕರ್ ಅಧ್ಯಯನ ಪೀಠದ ಹಿಂದೆ ಸರ್ಕಾರದ ಒತ್ತಡ; ಪರಮೇಶ್ವರ್
ರಾಹುಲ್ ಗಾಂಧಿ ಬಂದಲ್ಲೆಲ್ಲಾ ಕಾಂಗ್ರೆಸ್’ಗೆ ಸೋಲಾಗುತ್ತದೆ ಎಂದು ಬಿಜೆಪಿಗರು ಲೇವಡಿ ಮಾಡುತ್ತಾರೆ. ಹಾಗಾಗುವುದಾದರೇ ನಮಗೆ ಭಯವಿರಬೇಕಿತ್ತು, ಬಿಜೆಪಿಗೆ ಭಯವೇಕೆ? ಎಂದು ಪ್ರಶ್ನಿಸಿದರು.
ಭಾರತವನ್ನು ವಿಭಜನೆ ಮಾಡಿದ್ದು ಬಿಜೆಪಿ. ಈ ದೇಶದಲ್ಲಿ ಒಕ್ಕೂಟ ವ್ಯವಸ್ಥೆ ಜಾರಿಗೆ ತಂದಿದ್ದು ಹಾಗೂ ವಿಶ್ವದ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿದ್ದು ಕಾಂಗ್ರೆಸ್. ‌ಒಕ್ಕೂಟ ವ್ಯವಸ್ಥೆಗಾಗಿ ಕಾಂಗ್ರೆಸ್ ಅನೇಕ ತ್ಯಾಗ ಮಾಡಿದೆ. ಇಂದಿರಾಗಾಂಧಿ ಅವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈ ಇತಿಹಾಸವನ್ನು ಬಿಜೆಪಿಯವರು ಅರ್ಥ ಮಾಡಿಕೊಂಡರೆ ಅವರಿಗೆ ಇನ್ನಷ್ಟು ಗೌರವ ಬರುತ್ತದೆ ಎಂದರು.

About The Author

You May Also Like

More From Author

+ There are no comments

Add yours